ಸರ್ಕಾರಿ ಶಾಲೆಯಲ್ಲಿ ಸ್ವಯಂ ಕ್ವಾರಂಟೈನ್‌ನಾದ ಯುವಕ

RVT 4-2
Published on

ರೇವತಗಾಂವ: ಪುಣೆಗೆ ಕೆಲಸ ಅರಸಿ ಹೋಗಿದ್ದ ಗ್ರಾಮದ ಯುವಕನೊಬ್ಬ ಲಾಕ್‌ಡೌನ್ ಹಿನ್ನೆಲೆ ಗುರುವಾರ ಬೆಳಗ್ಗೆ ರೇವತಗಾಂವಕ್ಕೆ ಸೈಕಲ್ ಮೇಲೆ ವಾಪಸ್ಸಾಗಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾನೆ.
ಮಂಗಳವಾರ ಯುವಕನ ತಾಯಿ ಕೂಡ ಗ್ರಾಮಕ್ಕೆ ಬಂದರೂ ತಮ್ಮ ಮನೆಗೆ ತೆರಳದೆ ಗ್ರಾಮದ ಸರ್ಕಾರಿ ಶಾಲೆಯಲ್ಲೇ ಬಂದು ಸ್ವಯಂ ಕ್ವಾರಂಟೈನ್‌ಳಾಗಿದ್ದರು. ಇದೀಗ ಮಗನೂ ಶಾಲೆಯಲ್ಲೇ ಸ್ವಯಂ ಕ್ವಾರಂಟೈನ್‌ನಲ್ಲಿದ್ದಾನೆ. ಗ್ರಾಮಸ್ಥರಿಗೆ ಯಾವುದೇ ತೊಂದರೆ ನೀಡದೇ ಇದ್ದದ್ದನ್ನು ತಿಂದುಕೊಂಡು ಶಾಲೆಯಲ್ಲೇ ಉಳಿದುಕೊಂಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net