ಹೆದ್ದಾರಿಯಲ್ಲಿ ಭೀಕರ ಅಪಘಾತ, ಮೂವರ ದುರ್ಮರಣ

Accident
Published on

ಹುಬ್ಬಳ್ಳಿ: ಇಲ್ಲಿನ ಪುಣೆ& ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಗೋಳ ತಾಲೂಕಿನ ಜಿಗಳೂರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಪಕ್ಕದ ದರ್ಗಾಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಟನೆ ಶನಿವಾರ ತಡರಾತ್ರಿ ನಡೆದಿದೆ.
ಇಲ್ಲಿನ ನವನಗರ ನಿವಾಸಿ, ನಿವೃತ್ತ ಸ್ಟಾ್​ ನರ್ಸ್​ ಹನುಮಂತಪ್ಪ ಬೇವಿನಕಟ್ಟಿ (76), ಅವರ ಪತ್ನಿ ರೇಣುಕಾ ಹನುಮಂತಪ್ಪ ಬೇವಿನಕಟ್ಟಿ (75) ಹಾಗೂ ಕವಿವಿ ಧಾರವಾಡದ ಸಹಾಯಕ ಇಂಜಿನಿಯರ್​, ಬೆಳಗಾವಿ ಮೂಲದ ರವೀಂದ್ರ ನಾಗನಾಥ (56) ಮೃತಪಟ್ಟವರು. ಅರುಂಧತಿ ರವೀಂದ್ರ ನಾಗನಾಥ ಗಾಯಗೊಂಡವರು.
ಬೆಂಗಳೂರಿನಲ್ಲಿ ಗೃಹ ಪ್ರವೇಶ ಸಮಾರಂಭ ಮುಗಿಸಿಕೊಂಡು ನಾಲ್ವರೂ ಕಾರಿನಲ್ಲಿ ಬರುತ್ತಿದ್ದರು. ಹನುಮಂತಪ್ಪ ಕಾರು ಚಲಾಯಿಸುತ್ತಿದ್ದರು. ಹುಬ್ಬಳ್ಳಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಪಕ್ಕದಲ್ಲಿನ ಹಜರತ್​ ಸಯ್ಯದ್​ ಪತೇಶಾವಲಿ ದರ್ಗಾಕ್ಕೆ ಡಿಕ್ಕಿ ಹೊಡೆದಿದೆ. ವೇಗ ಹೆಚ್ಚಾಗಿದ್ದ ಕಾರಣ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಅರುಂಧತಿ ಅವರನ್ನು ಕಿಮ್ಸ್​ಗೆ ದಾಖಲಿಸಲಾಗಿದೆ. ಕುಂದಗೋಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net