ಫ್ಯೂಯಲ್ ಶಿಕ್ಷಣ ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ

csr journals
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯ ಫ್ಯೂಯಲ್ ಶಿಕ್ಷಣ ಸಂಸ್ಥೆ ದಿ ಸಿಎಸ್​ಆರ್ ಜರ್ನಲ್ಸ್​ನ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿದೆ.

ಮುಂಬೈನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಕೇತನ ದೇಶಪಾಂಡೆ ಮತ್ತು ಮುಖ್ಯ ಮಾರ್ಗದರ್ಶಕ , ಹುಬ್ಬಳ್ಳಿ ಮೂಲದ ಸಂತೋಷ ಹುರಳಿಕೊಪ್ಪಿಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಫ್ಯೂಯಲ್ (ಫ್ರೆಂಡ್ಸ್ ಯೂನಿಯನ್ ಫಾರ್ ಎನರ್ಜೆಜಿಂಗ್ ಲೈವ್ಸ್) ಸ್ಕಿಲ್-ಎ-ನೇಷನ್ ಪಯೋನಿಯರ್ ಆಂಡ್ ಲೀಡರಶಿಪ್ ಅವಾರ್ಡ್ ಪಡೆದಿದೆ. ಪಿ.ಟಿ. ಉಷಾ ಹಾಗೂ ಅಮೀರ್ ಉಪಾಧ್ಯಾಯ ಇದ್ದರು.

ಫ್ಯೂಯಲ್ ಕಳೆದ 18 ವರ್ಷಗಳಿಂದ ಯುವಕರಲ್ಲಿ ಕೌಶಲ ವೃದ್ಧಿ, ವಿದ್ಯಾರ್ಥಿ ವೇತನ ಹಾಗೂ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಶ್ರಮಿಸುತ್ತಿದೆ. ಹಿಂದುಳಿದ ಸಮುದಾಯಗಳನ್ನು ತಲುಪಲು ಮತ್ತು ಭಾರತದ ಯುವಕರಿಗೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ತೊಡಗಿಸಿಕೊಂಡಿದೆ. ಈ ಪ್ರಶಸ್ತಿ ನಮ್ಮ ದೂರದೃಷ್ಠಿ ಹಾಗೂ ಕರ್ತೃತ್ವ ಶಕ್ತಿಗೆ ದೊರೆತ ಪ್ರತಿಫಲವಾಗಿದೆ ಎಂದು ಸಂಸ್ಥೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net