

ಮುದ್ದೇಬಿಹಾಳ: ಸಾರ್ವಜನಿಕರು, ವಾಹನಗಳಿಗೆ ಇರಿದು ಪುಂಡಾಟ ನಡೆಸಿದ ಎಮ್ಮೆಯನ್ನು ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ ನೇತೃತ್ವದಲ್ಲಿ ಪೌರಕಾರ್ಮಿಕರು ಮತ್ತು ಮಹೆಬೂಬನಗರದ ಯುವಕರ ತಂಡ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಕಟ್ಟಿ ಹಾಕಿದರು.
ಗುರುವಾರ ಸಂತೆ ದಿನವಾದ್ದರಿಂದ ಪಟ್ಟಣದಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಮೊದಲಿಗೆ ಬಸ್ ನಿಲ್ದಾಣದಲ್ಲಿ ಪುಂಡಾಟ ನಡೆಸಿದ ಎಮ್ಮೆಯನ್ನು ಹಿಡಿಯಲು ಕೈಗೊಂಡ ಕಾರ್ಯಾಚರಣೆ ವಿಲಗೊಂಡಿತ್ತು. ಬಡಾವಣೆಗಳಲ್ಲೆಲ್ಲ ಓಡಾಡುತ್ತ ಹಳೇ ಸರ್ಕಾರಿ ಆಸ್ಪತ್ರೆ ಆವರಣದೊಳಕ್ಕೆ ನುಗ್ಗಿತು.
ಸುತ್ತಲೂ ಕಾಂಪೌಂಡ್ ಇದ್ದ ಕಾರಣ ಹಿಡಿಯಲು ಸುಲಭವಾಗಬಹುದು ಎಂದು ಅಂದಾಜಿಸಿ ಪ್ರಯತ್ನ ಮುಂದುವರಿಸಲಾಯಿತು. ಎಮ್ಮೆ ಸುಲಭವಾಗಿ ಬಲೆಗೆ ಬೀಳದ್ದರಿಂದ ಪುರಸಭೆ ಜೆಸಿಬಿ ಯಂತ್ರ ಬಳಸಿ ಕಾರ್ಯಾಚರಣೆ ನಡೆಸಲಾಯಿತು. ಬಹಳ ಹೊತ್ತು ಎಲ್ಲರನ್ನೂ ಓಡಾಡಿಸಿದ ಎಮ್ಮೆ, ತನ್ನನ್ನು ಹಿಡಿಯಲು ಎದುರಿಗೆ ಬಂದವರನ್ನೇ ಇರಿಯಲು ಹೋಗುತ್ತಿತ್ತು. ಎಮ್ಮೆ ಹತ್ತಿರ ಉಪಾಯದಿಂದ ಜೆಸಿಬಿ ಯಂತ್ರ ತೆಗೆದುಕೊಂಡು ಹೋದ ಚಾಲಕ ಯಮನಪ್ಪ ಬಿರಾದಾರ, ಅದರ ಮೇಲೆ ಜೆಸಿಬಿ ಬಕೆಟ್ ಇಳಿಸಿ ಭಾರ ಹಾಕಿ ಅಲುಗಾಡದಂತೆ ತಡೆದರು. ಕೂಡಲೇ ಅದರ ಸುತ್ತ ಎಲ್ಲರೂ ಮುತ್ತಿಕೊಂಡು ಹಗ್ಗದಿಂದ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಜೆಸಿಬಿ ಬಳಸುವಾಗ ಎಮ್ಮೆಗೆ ಯಾವುದೇ ಗಾಯ, ತೊಂದರೆ ಆಗಲಿಲ್ಲ. ನಂತರ ಅದನ್ನು ಪೊಲೀಸ್ ಅಧಿಕಾರಿಗಳ ಸಲಹೆಯಂತೆ ಪುರಸಭೆ ಅಧ್ಯಕ್ಷ ಗೊಳಸಂಗಿ ಅವರು ತಮ್ಮ ಮನೆಗೆ ಟಂಟಂ ವಾಹನದಲ್ಲಿ ಕೊಂಡೊಯ್ದು ಗಿಡವೊಂದಕ್ಕೆ ಕಟ್ಟಿ ಹಾಕಿ ಮೇವು, ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಕೊಂಡರು. ಆಸ್ಪತ್ರೆ ಕಾಂಪೌಂಡ್ ಹೊರಗೆ ಸಿಪಿಐ ಮೆಹಮೂದ್ ಫಸಿಯುದ್ದೀನ್, ಪೇದೆ ಸಲೀಮ್ ಹತ್ತರಕಿಹಾಳ ಜನರನ್ನು ನಿಯಂತ್ರಿಸಿ ಕಾರ್ಯಾಚರಣೆಗೆ ಅನುಕೂಲ ಕಲ್ಪಿಸಿದರು.
ಮಹಿಬೂಬ ಗೊಳಸಂಗಿ, ಸಲೀಮ ಬೇಪಾರಿ, ಮಕ್ತುಮ್ ಬೇಪಾರಿ, ಯಾಸೀನ್ ಅತ್ತಾರ, ಯಾಸೀರ್ ಢವಳಗಿ, ಶಬ್ಬೀರ ಪಡ್ನೂರೆ, ಪೌರ ಕಾರ್ಮಿಕರು ಕಾರ್ಯಾಚರಣೆಯಲ್ಲಿ ಅಪಾಯ ಲೆಕ್ಕಿಸದೆ ಪಾಲ್ಗೊಂಡಿದ್ದರು. ಒಂದು ವೇಳೆ ಪುಂಡಾಟ ತೋರುತ್ತಿದ್ದ ಎಮ್ಮೆ ಜನದಟ್ಟಣೆ ಇರುವ ಬಜಾರದಲ್ಲಿ ನುಗ್ಗಿದ್ದರೆ ಅವಡ ಸಂಭವಿಸುತ್ತಿತ್ತು ಎಂದು ಪ್ರತ್ಯದರ್ಶಿ ಲಾಡ್ಲೇಮಶ್ಯಾಕ ನದಾಫ್ ತಿಳಿಸಿದರು.
ಎಮ್ಮೆ ಹಿಡಿದು ಜನರ ಜೀವ, ವಾಹನಗಳಿಗೆ ಹಾನಿ ಆಗುವುದನ್ನು ತಪ್ಪಿಸಲಾಗಿದೆ. ಸದ್ಯ ನಮ್ಮ ಮನೆ ಹತ್ತಿರ ಎಮ್ಮೆ ಕಟ್ಟಿ ಹಾಕಲಾಗಿದೆ. ಎಮ್ಮೆ ಮಾಲೀಕರು ಕಾರ್ಯಾಚರಣೆ ನಡೆಸಿದ ರ್ಖಚನ್ನು ಪುರಸಭೆಗೆ ಕಟ್ಟಿದರೆ ಮರಳಿಸಲಾಗುತ್ತದೆ. &ಮಹಿಬೂಬ ಗೊಳಸಂಗಿ, ಅಧ್ಯರು, ಪುರಸಭೆ