ಚಾಲಕರಿಗೆ ಸಮಯ ಪಾಲನೆ ಮುಖ್ಯ

Published on

ಬಳ್ಳಾರಿ : ವಾಹನ ಚಾಲಕ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಶಿಸ್ತು-ಸಂಯಮ ಮುಖ್ಯ ಎಂದು ಜಿಲ್ಲಾ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ವೈ.ಮಲ್ಲೇಶಪ್ಪ ಹೇಳಿದರು.

ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಚಾಲಕರು ಮುಖ್ಯವಾಗಿ ಸಮಯ ನಿರ್ವಹಣೆ ಅಳವಡಿಸಿಕೊಳ್ಳಬೇಕು. ಕರ್ತವ್ಯ ನಿಷ್ಠೆಯೇ ಚಾಲಕರನ್ನು ಕಾಪಾಡುತ್ತದೆ. ಸಂಘದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಸಂಘದ ವಾರ್ಷಿಕ ಖರ್ಚು-ವೆಚ್ಚಗಳ ಮಾಹಿತಿ ಮಂಡಿಸಲಾಯಿತು. ಇದೇ ವೇಳೆ ಸಂಘದ ಸದಸ್ಯರಿಂದ ಅಭಿಪ್ರಾಯ ಮತ್ತು ಅನಿಸಿಕೆ ಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net