

ಸುಳ್ಯ: ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ 56ನೇ ವರ್ಷದ ಒತ್ತೆಕೋಲ ಸಂಪನ್ನಗೊಂಡಿತು.
ಹಸಿರುವಾಣಿ ಸಮರ್ಪಣೆಯೊಂದಿಗೆ ಆರಂಭಗೊಂಡ ಒತ್ತೆಕೋಲದ ಭಾಗವಾಗಿ ಸ್ಥಳ ಶುದ್ಧೀಕರಣ, ಗಣಪತಿ ಹೋಮ, ವಿಷ್ಣುಪುರ ದೈವಸ್ಥಾನದಿಂದ ಭಂಡಾರ ತೆಗೆದು ಬಳಿಕ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ರಾತ್ರಿ ಭಜನೆ ನಡೆಯಿತು.
ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಚಾಲನೆ ನೀಡಿದರು. ರಾತ್ರಿ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಿತು.
ಪ್ರಾತಃಕಾಲ 5ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಗ್ಗೆ ಮಾರಿಕಳ, ಗುಳಿಗ ದೈವದ ಕೋಲ, ಬಳಿಕ ಪ್ರಸಾದ ವಿತರಣೆ, ಹರಕೆ ಒಪ್ಪಿಸುವುದು ನಡೆಯಿತು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಮೊಕ್ತೇಸರರಾದ ವೆಂಕಟ್ರಮಣ ಆಚಾರ್ಯ ವಿಷ್ಣುಪುರ, ಜನಾರ್ದನ ಆಚಾರ್ಯ ವಿಷ್ಣುಪುರ, ಕೃಷ್ಣ ಆಚಾರ್ಯ ವಿಷ್ಣುಪುರ, ಉಪಾಧ್ಯಕ್ಷ ಶೇಷಪ್ಪ ಗೌಡ ಬೆದ್ರಂಗಳ, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಜತೆ ಕಾರ್ಯದರ್ಶಿ ಮಿಥುನ್ ಪೈಕ, ಆಡಳಿತ ಮಂಡಳಿ ಸದಸ್ಯರಾದ ಸಂಜೀವ ರೈ ಪೈಕ, ಕುಮಾರ್ ಆಚಾರ್ಯ ದೋಳ್ಪಾಡಿ, ಪ್ರದೀಪ್ ಬೊಬ್ಬೆಕೇರಿ, ಭವಿಷ್ ವಿಷ್ಣುಪುರ, ಪ್ರಮೋದ್ ವಿಷ್ಣುಪುರ, ಮೋಹನ್ ವಿಷ್ಣುಪುರ ರಾಕೇಶ್ ವಿಷ್ಣುಪುರ, ರಾಜೇಶ್ ವಿಷ್ಣುಪುರ ಹಾಗೂ ಭಕ್ತರು ಇದ್ದರು.