ಪಂಪ್‌ಸೆಟ್ ಕಳ್ಳರದ್ದೆನ್ನಲಾದ ವಾಹನದ ಚಲನವಲನ ಸಿಸಿಟಿವಿಯಲ್ಲಿ ಸೆರೆ

PTR_26 JUL_6
Published on


ಪುತ್ತೂರು: ಪುಣಚದ ವಿದ್ಯುತ್ ಉಪಕರಣ ದುರಸ್ತಿ ಅಂಗಡಿಯಿಂದ ೨ಲಕ್ಷ ರೂ ಮೌಲ್ಯದ ಕೃಷಿಕರ ಪಂಪ್ ಸೆಟ್ ಕಳವು ಮಾಡಿದ್ದ ಕಳ್ಳರು ಕೃತ್ಯಕ್ಕೆ ಬಳಸಿದ್ದ ವಾಹನದ ಚಲನವಲನ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಸುಮಾರು ೨ ತಾಸು ಪುಣಚ ಪೇಟೆಯಲ್ಲಿ ಓಡಾಡಿದ ವಾಹನ ಕೊನೆಗೆ ಪುತ್ತೂರು ಕಡೆಗೆ ಪಲಾಯನ ಮಾಡಿದೆ.


ಪುಣಚ ಗುರ್ಮೆ ನಿವಾಸಿ ಗಣೇಶ್ ಗೌಡ ಎಂಬುವರ ಅಂಗಡಿಯಿಂದ ಕಳ್ಳತನ ಆಗಿದ್ದು, ಗುರುವಾರ ಸ್ಥಳ ಮಹಜರು ವೇಳೆ ಜುಲೈ ೨೨ರಂದು ರಾತ್ರಿ ೧ ರ ಸುಮಾರಿಗೆ ಪುಣಚ ಗ್ರಾಮ ಪಂಚಾಯಿತಿ ಸಿಸಿ ಕ್ಯಾಮರಾದಲ್ಲಿ ಪಿಕಪ್ ವಾಹನವೊಂದು ಪುತ್ತೂರು ಭಾಗದಿಂದ ಪೇಟೆಗೆ ಬರುತ್ತಿರುವುದು ಪತ್ತೆಯಾಗಿದೆ.


ಹೀಗೆ ಬಂದ ವಾಹನ ಗುರ್ಮೆ ಕಡೆಗೆ ಹೋಗುವ ನಾಟೆಕಲ್ ರಸ್ತೆಗೆ ತಿರುಗಿ ಹೋಗುತ್ತದೆ. ಕೆಲವು ಸಮಯದ ಬಳಿಕ ಹಿಂದೆ ಬಂದು ಅಜ್ಜಿನಡ್ಕ ಭಾಗಕ್ಕೆ ಹೋಗಿ ಮತ್ತೆ ಬಂದು ಪುಣಚ ಪೆಟ್ರೋಲ್ ಪಂಪ್ ಬಳಿಗೆ ಹೋಗುತ್ತದೆ. ಆ ಬಳಿಕ ಸಹಕಾರಿ ಸಂಘದ ಸಮೀಪದಲ್ಲಿರುವ ಕಟ್ಟೆಯ ಬಳಿ ಕೆಲ ಸಮಯ ನಿಂತಿದ್ದು, ಬಳಿಕ ನಾಟೆಕಲ್ ರಸ್ತೆಯಲ್ಲಿ ಹೋಗಿ ಸುಮಾರು ೧.೩೦ತಾಸು ನಾಪತ್ತೆಯಾಗುತ್ತದೆ. ಆ ಬಳಿಕ ಬಂದ ವಾಹನ ಪುತ್ತೂರು ಭಾಗಕ್ಕೆ ಹೋಗಿರುವ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದೆ.


ಅಂಗಡಿಯಾತನಿಂದ ಇನ್ವೆಸ್ಟಿಗೇಷನ್!
ಪುಣಚದಲ್ಲಿ ಸುಮಾರು ೨ಲಕ್ಷ ಮೌಲ್ಯದ ಪಂಪ್ ಸೆಟ್ ಕಳವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದ ಹಿನ್ನಲೆಯಲ್ಲಿ ಅಂಗಡಿ ಮಾಲೀಕರೇ ಪೇಟೆಯ ವಿವಿಧ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಪುತ್ತೂರು ಭಾಗದಿಂದ ಆಗಮಿಸುವ ವಾಹನವೊಂದು ಅನುಮಾನಾಸ್ಪದವಾಗಿ ಸುತ್ತುವುದು ಗಮನಕ್ಕೆ ಬಂದು ಆ ವಾಹನದ ವಿಡಿಯೋ ದಾಖಲೆಯನ್ನು ಠಾಣೆಯ ವಿವಿಧ ಹಂತದ ಅಽಕಾರಿಗಳಿಗೆ ಕಳುಹಿಸಿದ್ದಾರೆ. ಆದರೆ ಪೊಲೀಸರಿಂದ ಇದಕ್ಕೂ ಯಾವುದೇ ಪ್ರತಿಕ್ರಿಯೆ ವ್ಯಕ್ತಗೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net