ಗ್ರಾಮದ ಬೇಡಿಕೆ ಈಡೇರಿಸಿ - ಪುಣಚ ಗ್ರಾಮಸಭೆಯಲ್ಲಿ ಸದಸ್ಯರ ಒತ್ತಾಯ

PTR_11 SEP_1
Published on

ವಿಟ್ಲ: ಪುಣಚ ಗ್ರಾಮ ಪಂಚಾಯಿತಿ ೨೦೨೫-೨೬ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಯಶೋದಾ ಯಾನೆ ಬೇಬಿ ಪಟಿಕಲ್ಲು ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಪ್ರತಿ ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಕೇಳಿದ ಬೇಡಿಕೆಗಳನ್ನು ನಿರ್ಣಯ ಮಾಡುವುದೇ ಗ್ರಾಮಸಭೆಯ ಉದ್ದೇಶವೆಂಬಂತಾಗಿದೆ. ಗ್ರಾಮಸಭೆಯ ನಿರ್ಣಯಕ್ಕೆ ಮೌಲ್ಯವಿಲ್ಲದಂತಾಗಿದೆ. ಗ್ರಾಮದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಪಂಚಾಯಿತಿ ಸಂಬಂಧಪಟ್ಟ ಇಲಾಖಾಽಕಾರಿಗಳನ್ನು ಎಚ್ಚರಿಸುತ್ತಿಲ್ಲ. ಪರಿಶಿಷ್ಟ ಪಂಗಡದ ಕಾಲನಿಯ ಹೆಸರಿನಲ್ಲಿ ಇತರ ಸಮುದಾಯದ ಜನವಾಸ್ತವ್ಯ ಇರುವೆಡೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂಬಿತ್ಯಾದಿ ಆರೋಪಗಳು ಗ್ರಾಮಸ್ಥರಿಂದ ವ್ಯಕ್ತವಾದವು. ಉಳಿದಂತೆ ಬೀದಿದೀಪ ಅಳವಡಿಕೆ, ದುರಸ್ತಿಯಲ್ಲಿ ಅವ್ಯವಹಾರವಾಗಿದೆ, ಸೋಲಾರ್ ವ್ಯವಸ್ಥೆಯಲ್ಲಿ ಪಂಚಾಯಿತಿ ಹಣ ಪೋಲಾಗಿದೆ ಇತ್ಯಾದಿ ಆರೋಪಗಳು ಕೇಳಿ ಬಂದವು.

ಆರೋಗ್ಯ, ಕಂದಾಯ, ಸಮಾಜ ಕಲ್ಯಾಣ, ಅರಣ್ಯ, ಪೊಲೀಸ್, ಮೆಸ್ಕಾಂ, ಶಿಕ್ಷಣ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆನರಾ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ಗ್ರಾಮಸ್ಥರ ಪರವಾಗಿ ವೆಂಕಟ್ರಮಣ ಪುಣಚ, ಶ್ರೀಧರ ಶೆಟ್ಟಿ ಬೈಲುಗುತ್ತು, ಸಂತೋಷ್ ನಾಯಕ್, ಮಹಾಲಿಂಗ ನಾಯ್ಕ, ಅಲ್ಬರ್ಟ್, ಲಕ್ಷ್ಮಣ್, ಕಿರಣ್ ಕಂಬಳಿಮೂಲೆ, ವಸಂತ ನಾಯಕ್, ವಿಶ್ವನಾಥ ರೈ ಕೋಡಂದೂರು ಮಾತನಾಡಿದರು.

ಮಾರ್ಗದರ್ಶಿ ಅಧಿಕಾರಿಯಾಗಿ ತಾಲೂಕು ಆರೋಗ್ಯ ಅಽಕಾರಿ ಅಶೋಕ್ ರೈ ಭಾಗವಹಿಸಿದ್ದರು. ಪಾರ್ವತಿ ವರದಿ ವಾಚಿಸಿದರು. ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net