

ಮಂಗಳೂರು: ನಿರಂತರ ಸುರಿಯುತ್ತಿರುವ ಬಿರುಸಿನ ಮಳೆಗೆ ಸೋಮವಾರ ಇದೇ ಪ್ರಥಮ ಬಾರಿಗೆ ಮಂಗಳೂರು ನಗರದ ಪಂಪ್‌ವೆಲ್ (ಮಹಾವೀರ) ವೃತ್ತ ಪೂರ್ಣ ಜಲಾವೃತಗೊಂಡಿದೆ.
ಮಧ್ಯಾಹ್ನ ಬಳಿಕ ಸುರಿದ ಭಾರೀ ಮಳೆಗೆ ಪಂಪ್‌ವೆಲ್ ಮೇಲ್ಸೇತುವೆ ಅಡಿಭಾಗ ಸುತ್ತಲು ನೆರೆ ನೀರು ತುಂಬಿ ಹರಿಯಲು ಆರಂಭಿಸಿದ ಕಾರಣ ಮಂಗಳೂರು- ಬೆಂಗಳೂರು ಸಂಪರ್ಕ ಭಾಗಶಃ ಕಡಿದುಕೊಂಡಂತಾಗಿದೆ. ನಗರದಿಂದ ತೊಕ್ಕೋಟು ಮತ್ತು ಕೇರಳ ಕಡೆಗೆ ಪ್ರಯಾಣಿಸುವವರು ಕೂಡ ಅನ್ಯ ರಸ್ತೆ ಬಳಸಿ ಸಂಚರಿಸುವ ಪರಿಸ್ಥಿತಿ ಗಂಟೆ ಕಾಲ ನಿರ್ಮಾಣವಾಯಿತು.
ಸಾಯಂಕಾಲ ಐದು ಗಂಟೆ ಬಳಿಕ ಘನ ವಾಹನಗಳು ಸಂಚರಿಸಲು ಆರಂಭಿಸಿತು.