VIDEO| ಹುತಾತ್ಮ ಯೋಧನ ಕುಟುಂಬದಲ್ಲಿ ಕಲಹ: ಸೊಸೆ ಕಲಾವತಿ ನಮ್ಮ ಜೊತೆ ಇಲ್ಲ, ಗುರು ತಾಯಿ ಚಿಕ್ಕತಾಯಮ್ಮ ಕಣ್ಣೀರು

GURU
Published on

ಮಂಡ್ಯ: ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಕಲಹ ನಡೆದಿದೆ. ಯೋಧ ಗುರು ಸಾವಿನ ಬಳಿಕ ಆಸ್ತಿಗಾಗಿ ಸಂಘರ್ಷ ನಡೆದಿದ್ದು, ಆಸ್ತಿ ಕಿತ್ತಾಟದಿಂದ ಅತ್ತೆ-ಸೊಸೆ ದೂರವಾಗಿದ್ದಾರೆ.

ಕುಟುಂಬ ಕಲಹ ಬಗ್ಗೆ ಸತ್ಯ ಒಪ್ಪಿಕೊಂಡ ಗುರು ತಾಯಿ ಚಿಕ್ಕತಾಯಮ್ಮ, ದಿಗ್ವಿಜಯ ನ್ಯೂಸ್​ ಮಾತನಾಡಿ, ನಮ್ಮ ಸೊಸೆ ಈಗ ನಮ್ಮ ಜೊತೆಯಲ್ಲಿ ಇಲ್ಲ. ನನ್ನ ಮಗನ ಸಾವಿನ ಬಳಿಕ ಕಲಾವತಿಯನ್ನ ಅವರ ತಂದೆ, ತಾಯಿ ನಮ್ಮ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ನಾವೆಲ್ಲ ಒಟ್ಟಿಗೆ ಇರೋಣ ಎಂದು ಕೇಳಿಕೊಂಡೆ. ಆದ್ರೂ ನನ್ನ ಮಾತನ್ನು ಆಕೆ ಕೇಳಲಿಲ್ಲ. ನನ್ನ ಮಗ ಇದ್ದಾಗ ಸೊಸೆಯನ್ನು ಮಗಳಂತೆ ನೋಡಿಕೊಂಡಿದ್ದೆ. ನನ್ನ ಮಗ ಗುರು ನಮ್ಮಲ್ಲಿ ಏನೇ ಜಗಳವಾದ್ರು ಸರಿಪಡಿಸುತ್ತಿದ್ದ.

ಇಂದು ಅವನು ಹುತಾತ್ಮನಾದ ದಿನ. ನಮ್ಮ ಕುಟುಂಬದವರೆಲ್ಲರೂ ಅವನ ಫುಜೆ ತೆರಳುತ್ತೇವೆ. ಅವನ ಸ್ನೇಹಿತರು ನಮ್ಮ ಜತೆ ಇರುತ್ತಾರೆ. ಆದರೆ ಸೊಸೆ ಕಲಾವತಿ ಪೂಜೆ ಸಲ್ಲಿಸಲು ಬರುತ್ತಾಳೋ‌‌ ಇಲ್ಲವೋ ಗೊತ್ತಿಲ್ಲ. ಆಕೆ ನಮ್ಮ ಸಂಪರ್ಕದಲ್ಲಿಲ್ಲ ಎಂದು ಗುರು ತಾಯಿ ಚಿಕ್ಕತಾಯಮ್ಮ ನೊಂದುಕೊಂಡರು. (ದಿಗ್ವಿಜಯ ನ್ಯೂಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net