ರೋಟರಿ ಕ್ಲಬ್ ನಿಂದ ಪೊಲೀಯೋ ನಿರ್ಮೂಲನೆ ದಿನಾಚರಣೆ

IMG-20251024-WA0031-1.jpg
Published on

ಹುಬ್ಬಳ್ಳಿ: ಇಲ್ಲಿಯ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಶುಕ್ರವಾರ ವಿಶ್ವ ಪೊಲೀಯೋ ನಿರ್ಮೂಲನೆ ದಿನ ಆಚರಿಸಲಾಯಿತು.

"ಪೊಲೀಯೋ ಮುಕ್ತ ವಿಶ್ವ' ದೃಷ್ಟಿಕೋನದೊಂದಿಗೆ ರೋಟರಿ ಕ್ಲಬ್ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹುಬ್ಬಳ್ಳಿಯ ಕೇಶ್ವಾಪುರ ನಕ್ಷತ್ರ ಕಾಲನಿಯಲ್ಲಿ ಪೊಲೀಯೋ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಪ್ಯಾರಾ ಒಲಿಂಪಿಕ್ ಶೂಟರ್ ಜ್ಯೋತಿ ಸಣ್ಣಕ್ಕಿ ಮಾತನಾಡಿ, ಧೈರ್ಯ, ಸಾಹಸದ ಗುಣ ಇದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂದರು.

ಡಾ. ಆಯೀಷಾ ಮುಲ್ಲಾ, ಸಂಜನಾ, ಪಲ್ಸ ಪೊಲೀಯೋ ಚೇರ್ಮನ್ ಡಾ. ವಿದ್ಯಾ ಹೊನವಾಡ, ಶ್ರಾವಣಿ ಇತರರು ಸಾಧಕರೊಂದಿಗೆ ಸಂವಾದ ನಡೆಸಿದರು. ಆಶಾ ಜೋತ್ವಾನಿ, ಕ್ಲಬ್ ಅಧ್ಯಕ್ಷೆ ಅಂಜನಾ ಬಸನಗೌಡ್ರ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net