ಪುಳಿಮುಂಚಿ ವೀಕ್ಷಿಸಿದ ಅದೃಷ್ಟಶಾಲಿ ಚಿತ್ರ ಪ್ರೇಮಿಗೆ ಬೈಕ್

jjjjjjjjj
Published on



ಮಂಗಳೂರು : ಎಚ್‌ಪಿಆರ್ ಫಿಲಂಸ್ ಮತ್ತು ತ್ರಿಜಯ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ತಯಾರಾದ, ತ್ರಿಶೂಲ್ ಶೆಟ್ಟಿ ನಿರ್ದೇಶನದ ಪುಳಿಮುಂಚಿ ತುಳು ಸಿನಿಮಾ ತುಳುನಾಡಿನಾದ್ಯಂತ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತ 25ನೇ ದಿನಗಳತ್ತ ಮುನ್ನುಗ್ಗುತ್ತಿದೆ.
ಹಾಸ್ಯ ನಟರಾದ ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು ಮುಂತಾದ ತುಳುನಾಡಿನ
ಕಾಮಿಡಿ ದಿಗ್ಗಜರು ನಟಿಸಿರುವ ಈ ಪುಳಿಮುಂಚಿ ಚಿತ್ರವನ್ನು ವೀಕ್ಷಿಸಿದ ಒಬ್ಬ ಅದೃಷ್ಟಶಾಲಿ ಚಿತ್ರ ಪ್ರೇಮಿಗೆ ಬೈಕ್ ಗೆಲ್ಲುವ ಅವಕಾಶ ಕಲ್ಪಿಸಲಾಗಿತ್ತು.ನಗರದ ಯೆಯ್ಯಡಿಯ ಶ್ರೀ ಅನಘ ಸುಜುಕಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ಹಾಗೂ ಹಾಸ್ಯ ನಟ ಭೋಜರಾಜ ವಾಮಂಜೂರು ವಿಜೇತರನ್ನು ಆರಿಸಿದರು. ವಿಜೇತ ಅದೃಷ್ಟಶಾಲಿಗೆ ಶ್ರೀ ಅನಘ ಸುಜುಕಿ ಇವರಿಂದ 2.8 ಲಕ್ಷ ರೂ.ಮೌಲ್ಯದ ಸುಜುಕಿ ಜಿಕ್ಸರ್ ಬೈಕ್ ಬಹುಮಾನವಾಗಿ ಘೋಷಿಸಲಾಯಿತು.
ಉದ್ಯಮಿ ರಾಜೇಶ್ ಕುತ್ತಾರ್, ನಿರ್ಮಾಪಕ ಹರಿಪ್ರಸಾದ್ ರೈ, ನಿರ್ದೇಶಕ ತ್ರಿಶೂಲ್ ಶೆಟ್ಟಿ , ಶ್ರೀ ಅನಘ ಸುಜುಕಿಯ ನಿರ್ವಾಹಕಿ ಪೂರ್ಣಿಮಾ, ನಾಯಕ ನಟ ವಿನೀತ್ ಕುಮಾರ್, ಛಾಯಾಗ್ರಾಹಕ ಮಯೂರ ಶೆಟ್ಟಿ, ಸಂಗೀತ ನಿರ್ದೇಶಕ ಕಿಶೋರ್ ಕುಮಾರ್ ಶೆಟ್ಟಿ, ಸಂಭಾಷಣೆಕಾರ ಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net