ಪುಲಿಗೆರೆ ಉತ್ಸವ 21ರಿಂದ

LXR PULIGERE USTAV
Published on

ಲಕ್ಷೆ್ಮೕಶ್ವರ: ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಇನ್​ಫೋಸಿಸ್ ಪ್ರತಿಷ್ಠಾನದ ಸಹಕಾರ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದಲ್ಲಿ 8ನೇ ಆವೃತ್ತಿಯ ಪುಲಿಗೆರೆ ಉತ್ಸವ ಫೆ 21, 22 ಮತ್ತು 23 ರಂದು ಜರುಗಲಿದೆ.

ಫೆ. 21ರಂದು ಬೆಳಗ್ಗೆ 6 ಗಂಟೆಗೆ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ.ರಾವ್ ಮತ್ತು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಇನ್ಪೋಸಿಸ್ ಪ್ರತಿಷ್ಠಾನದ ಸಿಎಸ್​ಆರ್ ವಿಭಾಗದ ವ್ಯವಸ್ಥಾಪಕರಾದ ಪ್ರಶಾಂತ ಹೆಗಡೆ ಸೇರಿ ಹಲವರು ಆಗಮಿಸುವರು.

ಉದಯರಾಗ-1: ಬೆಳಗ್ಗೆ 6ಕ್ಕೆ ಎಸ್.ಬಿ. ಭಜಂತ್ರಿ ಸಹ ಕಲಾವಿದರಿಂದ ಶಹನಾಯಿ ವಾದನ, ಬೆಳಗ್ಗೆ 7ಕ್ಕೆ ಪರಶುರಾಮ ಭಜಂತ್ರಿ ಸಹ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದೆ. ಸಂಜೆ 4ಕ್ಕೆ ಸೋಮೇಶ್ವರನ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ನೆರವೇರಲಿದೆ. ಸಂಜೆ 6ಕ್ಕೆ ಮೃತ್ಯುಂಜಯ ದೊಡ್ಡವಾಡ ಅವರಿಂದ ವಚನ, ಜನಪದ, ತತ್ವ ಪದಗಳ ಪ್ರಸ್ತುತಿ. 7ಕ್ಕೆ ಸಿದ್ದಾಪುರದ ಕೊಳಗಿ ಕೇಶವ ಹೆಗಡೆ ತಂಡದಿಂದ ಯಕ್ಷಗಾನ, 8.30ಕ್ಕೆ ಹುಬ್ಬಳ್ಳಿಯ ಭಾಗ್ಯಶ್ರೀ ಗಾಳೆಮ್ಮ ತಂಡದಿಂದ ಜಾನಪದ ನೃತ್ಯ ಪ್ರದರ್ಶನಗೊಳ್ಳಲಿದೆ.

ಫೆ. 22 ರ ಉದಯರಾಗ-2 : ಬೆಳಗ್ಗೆ 6ಕ್ಕೆ ಗದಗನ ರಾಜೀವ ಈಶ್ವರ ಹಿರೇಮಠ ಅವರಿಂದ ಸಿತಾರ್ ವಾದನ, 7ಕ್ಕೆ ಡಾ.ಶಿವಬಸಯ್ಯ ಗಡ್ಡದಮಠ ಮತ್ತು ಸಹ ಕಲಾವಿದರಿಂದ ಹಿಂದೂಸ್ತಾನಿ ಗಾಯನ. ಸಂಜೆ 6ಕ್ಕೆ ಅರ್ಚನಾ ಕಾಮತ್ ಮತ್ತು ತಂಡದಿಂದ ಹಿಂದುಸ್ತಾನಿ ಗಾಯನ, 7ಕ್ಕೆ ಬೆಂಗಳೂರಿನ ಕೌಶಲ್ಯ ನಿವಾಸ ತಂಡದಿಂದ ನೃತ್ಯ ನಾಟಕ ರಾತ್ರಿ 8.30ಕ್ಕೆ ಸ್ಥಳೀಯ ಕಲಾವಿದೆ ಭವ್ಯ ಕತ್ತಿ ತಂಡದಿಂದ ಭರತನಾಟ್ಯ ಪ್ರದರ್ಶನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net