

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ 5 ವಷರ್ಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆ ಪ್ರಕ್ರಿಯೆಯಲ್ಲಿ 18 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ನಿರ್ದೇಶಕರು ಬುಧವಾರ ಸಭೆ ಸೇರಿ ನೂತನ ಅಧ್ಯಕ್ಷರನ್ನಾಗಿ ಪುಲಕೇಶಿ ಉಪನಾಳ ಮತ್ತು ಉಪಾಧ್ಯಕ್ಷರನ್ನಾಗಿ ಗುರುಸಿದ್ದಪ್ಪ ಬಸಪ್ಪ ಮೆಣಸಿನಕಾಯಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಆಯ್ಕೆಯಾದ ನಿರ್ದೇಶಕರು: ಗುರುಶಿದ್ದಪ್ಪ ಮೆಣಸಿನಕಾಯಿ, ಚನ್ನಪ್ಪ ಗುಂಜಾಳ, ನಿಂಗಪ್ಪ ರಗಟಿ, ನೀಲಪ್ಪ ಹತ್ತಿ, ಪುಲಿಕೇಶಿ ಉಪನಾಳ, ಬಸವರಾಜ ಸಾಸಲವಾಡ, ಮರುಳಾರಾಧ್ಯ ಕಳ್ಳಿಮಠ, ರಾಮಚಂದ್ರಸಾ ಬಾಕಳೆ, ರೇವತಿ ಉಪನಾಳ, ಶಂಕರಪ್ಪ ಗೊರವರ, ಶಿವಲಿಂಗಪ್ಪ ಬಳಿಗಾರ, ಶಿವಾನಂದ ಹತ್ತಿ, ಮೌಲಾಸಾಬ ಗುಡಾರದ, ಬಸವರಾಜ ಮುದಿಮಲ್ಲನವರ, ಶಿರೂರಪ್ಪ ಬಿಸನಳ್ಳಿ, ಬಸವರಾಜ ಕಳಸದ, ನಂದಾ ದರ್ಮಾಯತ್, ಪ್ರೇಮಕ್ಕ ಗಿಡಿಬಿಡಿ. ಗಿರಣಿಯ ಮಾಜಿ ಎಂಡಿ ಜೆ. ಕೋಟ್ರೇಶ, ಮಾಜಿ ನಿರ್ದೇಶಕರಾದ ಸೋಮೇಶ ಉಪನಾಳ, ರಾಮಪ್ಪ ನಾಗನೂರು, ಫಕೀರಪ್ಪ ಗುಡಗೇರಿ, ಗಿರಣಿಯ ಸಿಬ್ಬಂದಿ ಇದ್ದರು. ಚುನಾವಣಾ ಅಧಿಕಾರಿಯಾಗಿ ಬಿ.ಆರ್. ನಿಡಗುಂದಿಮಠ ಕಾರ್ಯನಿರ್ವಹಿಸಿದರು.