ಡಿವೈಡರ್‌ಗೆ ಕಾಯಿ ಒಡೆದ ಭಕ್ತರು ; ಪಾವಗಡ ಶನಿದೇವರ ದೇಗುಲ ಬಂದ್ ಹಿನ್ನೆಲೆಯಲ್ಲಿ ಪರದಾಟ

14 pvg 1
Published on

ಪಾವಗಡ : ಕರೊನಾ 3ನೇ ಅಲೆ ತಡೆಗಟ್ಟಲು ವಾರಾಂತ್ಯ ಕರ್ಪ್ಯೂ ಜಾರಿ ಮಾಡಿ ಡಿಸಿ ಆದೇಶ ಹೊರಡಿಸಿರುವುದು ಗೊತ್ತಿಲ್ಲದೆ ಪಾವಗಡದ ಶನಿಮಹಾತ್ಮ ದೇವಸ್ಥಾನಕ್ಕೆ ಬಂದ ಭಕ್ತರು ದೇವಾಲಯದ ಬಾಗಿಲು ಮುಚ್ಚಿರುವುದನ್ನು ಕಂಡು ದೇವಾಸ್ಥಾನದ ಎದುರಿನ ರಸ್ತೆಯ ಡಿವೈಡರ್‌ಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿಕೊಂಡು ಹೋದರು.

ಅಲ್ಲದೇ ತುಮಕೂರು ರಸ್ತೆಯ ಮಾರ್ಗದ ಡಿವೈಡರ್‌ನಲ್ಲಿ ದೇವಸ್ಥಾನದಿಂದ ಹುಂಡಿ ಇಡಲಾಗಿತ್ತು. ದೂರದಿಂದ ಬಂದ ಭಕ್ತರು ಹುಂಡಿಗೆ ಕಾಣಿಕೆ ಹಾಕುತ್ತಿದ್ದ ದೃಶ್ಯ ಕಂಡುಬಂತು.

ಶನಿಮಹಾತ್ಮ ದೇವಸ್ಥಾನದ ಸುತ್ತಮುತ್ತ ಪಾವಗಡ ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮಿಕಾಂತ್ ಮತ್ತು ಸಿಬ್ಬಂದಿ ಸರ್ಪಗಾವಲು ಹಾಕಿದ್ದಾರೆ. ಶ್ರಾವಣ ಶನಿವಾರದ ಪ್ರಯುಕ್ತ ದೇಗುಲ ಬಾಗಿಲು ಮುಚ್ಚಿದ್ದರಿಂದ ರಾಜ್ಯ ಹಾಗೂ ಸೀಮಾಂಧ್ರ ಮತ್ತು ತೆಲಂಗಾಣ ಭಾಗಗಳಿಂದ ಆಗಮಿಸಿದ್ದ ಭಕ್ತರು ದರ್ಶನವಿಲ್ಲದೆ ಪರದಾಡಿದರು.

ದೇವಸ್ಥಾನದ ಮುಂಭಾಗದ ಬಳ್ಳಾರಿ ರಸ್ತೆ, ತುಮಕೂರು, ಶಿರಾ ರಸ್ತೆಯ ಮಾರ್ಗಗಳನ್ನು ಮುಚ್ಚಿ ಭಕ್ತರು ಮತ್ತು ವಾಹನಗಳು ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ದೇವಸ್ಥಾನದಲ್ಲಿ ಮುಡಿ ತೆಗೆಯಲು ನಿಷೇಧವಿರುವುದರಿಂದ ಹೊಸಬಸ್ ನಿಲ್ದಾಣದ ಹತ್ತಿರ 300 ರೂಪಾಯಿ ಹಾಗೂ ಹೇರ್ ಡ್ರೇಸಸ್ ಮಾಲೀಕರು 200 ರೂಪಾಯಿ ಮುಡಿ ತೆಗೆಯಲು ಹಣ ಪಡೆದರು.

ಕರ್ಪ್ಯೂಗೆ ಭಕ್ತರ ಆಕ್ರೋಶ : ವಾರಾಂತ್ಯ ಕರ್ಯ್ೂ ಮಾಹಿತಿ ಇಲ್ಲದೆ ಭಕ್ತರಿಗೆ ಅನನುಕೂಲವಾದ್ದರಿಂದ ಸ್ನಾನ, ಶೌಚಗೃಹ, ಊಟಕ್ಕೂ ಪರದಾಡುವಂತಾಯಿತು. ವಾರದ ಮುಂಚೆಯೇ ಕರ್ಯ್ೂ ಆದೇಶ ಹೊರಡಿಸಿದ್ದರೆ ಭಕ್ತರಿಗೆ ತೊಂದರೆಯಾಗುತ್ತಿರಲಿಲ್ಲ. ಶನಿವಾರ, ಭಾನುವಾರ, ಸೋಮವಾರ ದೇಗುಲ ಬಾಗಿಲು ಮುಚ್ಚಿರುತ್ತದೆ. ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಬಾಗಿಲು ತೆರೆದಿದ್ದು, ಯಾವುದೇ ಪೂಜೆಗಳಿರುವುದಿಲ್ಲ. ಕೇವಲ ದರ್ಶನ ಇರುತ್ತದೆ. ಭಕ್ತರು ಸಹಕರಿಸುವಂತೆ ಎಸ್.ಎಸ್.ಕೆ.ಸಂಘದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net