

ಹನೂರು: ತಾಲೂಕಿನ ಮಾರ್ಟಳ್ಳಿ ಚರ್ಚ್ ಆವರಣದಲ್ಲಿ ಶುಕ್ರವಾರ ಆಯುಧಪೂಜೆಯ ಹಿನ್ನೆಲೆಯಲ್ಲಿ ಫಾದರ್ ಕ್ರಿಸ್ಟೋಫರ್ ಸಗಾಯರಾಜ್ ಅವರು ಸರ್ವ ಧರ್ಮೀಯರ ವಾಹನಗಳಿಗೆ ಪೂಜೆ ಸಲ್ಲಿಸಿದರು.
ಆಯುಧಪೂಜೆಯ ಹಿನ್ನೆಲೆ ಹಿಂದುಗಳು ವಾಹನಗಳಿಗೆ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಮಾರ್ಟಳ್ಳಿ ಗ್ರಾಮದಲ್ಲಿ ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಹೊಂದಿರುವ ಸೈಕಲ್, ಬೈಕ್, ಕಾರು, ಲಾರಿ ಹಾಗೂ ಇನ್ನಿತರ ವಾಹನಗಳನ್ನು ಶುಚಿಗೊಳಿಸಿ ಪುಷ್ಪಗಳಿಂದ ಸಿಂಗರಿಸಿ ಧರ್ಮ ಗುರುಗಳಿಂದ ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡುವುದರ ಮೂಲಕ ಪೂಜೆ ನೆರವೇರಿಸಿದರು. ಈ ವೇಳೆ ಧರ್ಮಗುರುಗಳು ಪ್ರಾರ್ಥಿಸಿ ಶುಭವಾಗಲೆಂದು ಹಾರೈಸಿದರು. ಹಿಂದು ಧರ್ಮದ ಸಂಪ್ರದಾಯದಂತೆ ಸರ್ವ ಧರ್ಮಿಯರ ವಾಹನಗಳಿಗೆ ಪೂಜೆ ಸಲ್ಲಿಸಿರುವುದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.