

ಚಳ್ಳಕೆರೆ: ತಾಲೂಕಿನ ಹೊಟ್ಟೆಪ್ಪನಹಳ್ಳಿ ಸಮೀಪದ ತಿಮ್ಮನಮಟ್ಟಿ ಗಡ್ಡೆಯಲ್ಲಿ ಶುಕ್ರವಾರ ಮಳೆಗಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಗ್ರಾಮಸ್ಥರು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ 10 ವರ್ಷಗಳಿಂದ ಬೆಳೆ ನಷ್ಟ ಮತ್ತು ಬರಗಾಲದ ಪರಿಸ್ಥಿತಿ ಕಾಣುತ್ತಿದ್ದೇವೆ. ಮುಂಗಾರಿನಲ್ಲಿ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಪರಿಸ್ಥಿತಿ ಇದೆ. ಸಕಾಲಕ್ಕೆ ದೇವರ ಕೃಪೆಯಿಂದ ಮಳೆಯಾಗಿ ಜನ ಜಾನುವಾರುಗಳಿಗೆ ಸಮೃದ್ದಿ ತರಲೆಂದು ಪ್ರಾರ್ಥಿಸಿದರು.
ಪೂಜಾರಿ ಕೆ.ಉಜ್ಜಿನಪ್ಪ, ಎಲ್.ತಿಪ್ಪೇಸ್ವಾಮಿ, ಪಿ.ಡಿ.ರುದ್ರಮುನಿ, ಕೆ.ಸಿದ್ದೇಶ, ಕೆಂಚಣ್ಣ, ಆರ್.ದೇವೇಂದ್ರಪ್ಪ, ಎಚ್.ಕೆ.ಸ್ವಾಮಿ ಮತ್ತಿತರರು ಇದ್ದರು.