ಮಳೆಗಾಗಿ ಕುಸ್ಲೆ ದೇವರಿಗೆ ಪೂಜೆ

Kusle god
Published on

ಅಂಕೋಲಾ: ತಾಲೂಕಿನ ಬೆಳಂಬಾರ, ಹೊನ್ನೇಬೈಲ್, ತಾಳೇಬೈಲ್, ಮುಡ್ರಾಣಿ ಸುತ್ತಮುತ್ತಲಿನ ಹಾಲಕ್ಕಿ ಸಮಾಜದ ಕೃಷಿಕರು ಹೊನ್ನೆಬೈಲ್ ಗ್ರಾಪಂ ವ್ಯಾಪ್ತಿಯ ಕುಶಲ (ಕೃಷ್ಣ) ದೇವಸ್ಥಾನದ ಕುಸ್ಲೆ ದೇವರಿಗೆ ಸೋಮವಾರ ವಿಶೇಷ ಪೂಜೆ ನಡೆಸಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಜಿಲ್ಲಾ ಹಾಲಕ್ಕಿ ಸಮಾಜದ ಅಧ್ಯಕ್ಷ ಮತ್ತು ಕುಸ್ಲೆ ದೇವಾಲಯದ ಮೊಕ್ತೆಸರ ಹನುಮಂತ ಗೌಡ ನೇತೃತ್ವದಲ್ಲಿ ಹೊನ್ನೇಬೈಲ್ ಗ್ರಾಮದ ಕುಸ್ಲೆ ದೇವಾಲಯದಲ್ಲಿ ಸಾಂಪ್ರದಾಯಿಕ ಗುಮಟೆ ವಾದನೆ, ಜಾನಪದ ಕುಣಿತ ಪ್ರದರ್ಶಿಸಿ, ದೇವರಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯದ ಅರ್ಚಕರು, ಹಾಲಕ್ಕಿ ಸಮಾಜದ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net