ಗಣೇಶ ವಿರ್ಸಜನಾ ಬಾವಿಗೆ ಪೂಜೆ ಸೆ. 5ರಂದು

h3-giranichal
Published on

ಹುಬ್ಬಳ್ಳಿ: ಯುವಕನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಇಲ್ಲಿಯ ಇಂದಿರಾ ಗಾಜಿನ ಮನೆ ಪಕ್ಕದ ಗಣೇಶ ವಿಸರ್ಜನಾ ಬಾವಿಯಲ್ಲಿನ ನೀರು ಮಂಗಳವಾರ ಹೊರಬಿಟ್ಟು ಸ್ವಚ್ಛಗೊಳಿಸಲಾಗಿದ್ದು, ಸೆ. 5ರಂದು ಬೆಳಗ್ಗೆ 10ಕ್ಕೆ ಪೂಜಾ ಕೈಂಕರ್ಯ ನೆರವೇರಿಸಲು ನಿರ್ಧರಿಸಲಾಗಿದೆ.
ಗಣೇಶ ಚತುರ್ಥಿ ನಿಮಿತ್ತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಾದಾಗಿನಿಂದ 11ದಿನಗಳವರೆಗೆ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಾವಿಯನ್ನು ಸ್ವಚ್ಛಗೊಳಿಸಿದ್ದು, ವೇದಮೂರ್ತಿಗಳು ಹಾಗೂ ಪಾಲಿಕೆ ಆಯುಕ್ತರ ಮುಂದಾಳತ್ವದಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net