ಪಾರ್ವತಿ ದೇವಿಯ ಪೂಜಾ ಮಹೋತ್ಸವ

ಪಾರ್ವತಿ ದೇವಿಯ ಪೂಜಾ ಮಹೋತ್ಸವ
Published on

ಕಪ್ಪಸೋಗೆ: ಹುಲ್ಲಹಳ್ಳಿ ಹೋಬಳಿಯ ಚಂದ್ರವಾಡಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಪಾರ್ವತಿ ದೇವಿಯ 32ನೇ ವರ್ಷದ ಪೂಜಾ ಮಹೋತ್ಸವ ಹಾಗೂ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ನಡೆಯಿತು.

ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯ, ಹೋಮ ಹವನಗಳು ನೆರವೇರಿದವು. ಬ್ರಾಹ್ಮಿ 4ರ ಮಹೂರ್ತದಲ್ಲಿ ಶ್ರೀ ಪಾರ್ವತಿ ದೇವಿ ಅಮ್ಮನವರಿಗೆ ನಂದಿ ಪಂಚ ಕಳಸ, ದುರ್ಗಾ ಹೋಮ, ಗಣಪತಿ ಪೂಜೆ, ಮಹಾ ರುದ್ರಭಿಷೇಕ, ಕುಂಕುಮಾರ್ಚನೆ ಸೇವೆಗಳು ನೆರವೇರಿದವು.

12.30ರ ಶುಭ ಮುಹೂರ್ತದಲ್ಲಿ ಮಹಾದೇವಿಗೆ ಮಹಾಮಂಗಳಾರತಿ, ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ದೇವಾಲಯ ಉದ್ಘಾಟಿಸಲಾಯಿತು.

ದೇವಾಲಯ ಹಾಗೂ ಗ್ರಾಮವನ್ನು ವಿದ್ಯುತ್ ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಾತ್ರಿ 10ರ ನಂತರ ಪಾರ್ವತಿ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವೀರಗಾಸೆ ಕುಣಿತ ಮಂಗಳವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net