ಚಂದ್ರಯಾನ ಯಶಸ್ಸಿಗೆ ಪೂಜೆ

poojaa
ಕಡೂರಿನಲ್ಲಿ ಮಹಾ ಗಣಹೋಮ ನಡೆಸಲಾಯಿತು.
Published on

ಕಡೂರು: ಭಾರತದ ಚಂದ್ರಯಾನ-3 ನೌಕೆ ಚಂದ್ರನ ಅಂಗಳವನ್ನು ಯಶಸ್ವಿಯಾಗಿ ಸ್ಪರ್ಶಿಸುವಂತೆ ಪ್ರಾರ್ಥಿಸಿ ಬುಧವಾರ ಮಹಾ ಗಣಹೋಮ ನಡೆಸಲಾಯಿತು.

ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಶಶಾಂಕ್ ಹಿಂದು ನೇತೃತ್ವದಲ್ಲಿ ಅರಿವಿನ ಮನೆ ಸಹಕಾರ ಸಂಘದ ಬ್ಯಾಂಕ್ ಕಚೇರಿ ಆವರಣದಲ್ಲಿ ಮೂರು ತಾಸಿಗೂ ಅಧಿಕ ಕಾಲ ವಿಶೇಷ ಪೂಜೆ ಹಾಗೂ ಸಂಕಲ್ಪ ಪೂಜೆಗಳನ್ನು ನೆರವೇರಿಸಲಾಯಿತು.
ಶಶಾಂಕ್ ಹಿಂದು ಮಾತನಾಡಿ, ಕಳೆದ ಬಾರಿ ಚಂದ್ರಯಾನ ವಿಫಲವಾಗಿತ್ತು. ಈ ಬಾರಿ ನಡೆಯುವ ಚಂದ್ರಯಾನ-3 ದೇಶಪ್ರೇಮಿಗಳಿಗೆ ಅವಿಸ್ಮರಣೀಯ ದಿನ. ಚಂದ್ರನ ಅಂಗಳದಲ್ಲಿ ಭಾರತದ ಉಪಗ್ರಹ ಯಶಸ್ವಿಯಾಗಿ ಇಳಿಯಬೇಕು. ಅನೇಕ ವಿಜ್ಞಾನಿಗಳ ಶ್ರಮ ಫಲ ನೀಡಬೇಕಿದೆ ಎಂದರು.
ಪ್ರದೇಶ ಜಾಗರಣ ಮಂಚ್‌ನ ದಕ್ಷಿಣ ಮಧ್ಯಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್, ಅರಿವಿನ ಮನೆ ಸಹಕಾರ ಸಂಘದ ಅಧ್ಯಕ್ಷ ಶಶಿಧರ್, ಎಬಿವಿಪಿ ತಾಲೂಕು ಸಂಚಾಲಕ ರವಿತೇಜ, ಷಣ್ಮುಖ, ಚಂದು, ಶರತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net