

ಕೆ.ಆರ್.ಸಾಗರ: ಇಲ್ಲಿನ ಅರಳಿಕಟ್ಟೆಯ ಶ್ರೀ ರಾಮಾಂಜುನೇಯ ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ನಾಗದೇವತೆ ಸನ್ನಿಧಿಯಲ್ಲಿ 7ನೇ ವರ್ಷದ ಪೂಜಾ ಮಹೋತ್ಸವ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಗುರುವಾರ ಜರುಗಿತು.
ಅರ್ಚಕ ಸತೀಶ್ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ನವಗೃಹ ಪೂಜೆ, ಗಣಪತಿ, ನವಗ್ರಹ, ಸುಬ್ರಹ್ಮಣ್ಯ ಹೋಮ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ನಿವೃತ್ತ ಇಂಜಿನಿಯರ್ ಬಸವರಾಜೇಗೌಡ, ಗ್ರಾ.ಪಂ.ಉಪಾಧ್ಯಕ್ಷ ಪಾಪಣ್ಣ ಇತರರು ಇದ್ದರು.