ಬನ್ನಿಮರಕ್ಕೆ ಮಹಿಳೆಯರಿಂದ ಪೂಜೆ

arasiker
ಸಂಕೋಡನಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಅಂಬು ಹೊಡೆಯುವ ಮುನ್ನ ಪೂಜೆ ಸಲ್ಲಿಸುತ್ತಿರುವುದು.
Published on

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ, ಮನಕತ್ತೂರು ಕಾಲಭೈರವೇಶ್ವರ ಸ್ವಾಮಿ, ಸಂಕೋಡನಹಳ್ಳಿ ರಂಗನಾಥಸ್ವಾಮಿ, ಶ್ರೀ ಗುರುಸಿದ್ದೇಶ್ವರಸ್ವಾಮಿ ದೇಗುಲ, ಗಣಪತಿ ದೇಗುಲದ ಆವರಣ ಸೇರಿದಂತೆ ವಿವಿಧೆಡೆ ಮಂಗಳವಾರ ಸಂಜೆ ದಸರಾ ಮಹೋತ್ಸವ ನೆರವೇರಿತು.

ಇದಕ್ಕೂ ಮುನ್ನ ಸೋಮವಾರ ರಾತ್ರಿ ಆಯುಧ ಪೂಜೆ ನೆರೆೆವೇರಿಸಲಾಯಿತು .ಮಂಗಳವಾರ ಮಧ್ಯಾಹ್ನ ಶಮಿವೃಕ್ಷಕ್ಕೆ ಪೂಜಿಸಿ ಸಲ್ಲಿಸಿ ಬಾಳೆಕಂದು ನೆಟ್ಟು ತುಪಾಕಿಯಿಂದ ಹೊಡೆಯುವ ಮೂಲಕ ವಿಜಯದಶಮಿಯನ್ನು ಸಡಗರದಿಂದ ಆಚರಿಸಲಾಯಿತು.

ನಗರದ ಹೃದಯ ಭಾಗದಲ್ಲಿರುವ ಕೆಂಗಲ್ ಸಿದ್ದೇಶ್ವರ, ದೇವಾಲಯದ ಬಳಿ ನೂರಾರು ಮಹಿಳೆಯರು ಬನ್ನಿಮರಕ್ಕೆ ಬಳೆ, ರವಿಕೆ, ಸೀರೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮುತ್ತೈದೆಯರಿಗೆ ಮಡಿಲು ತುಂಬುವ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net