ಚಾಮುಂಡೇಶ್ವರಿ, ಮುತ್ತಪ್ಪ ದೇಗುಲದಲ್ಲಿ ಪೂಜೆ

ಚಾಮುಂಡೇಶ್ವರಿ, ಮುತ್ತಪ್ಪ ದೇಗುಲದಲ್ಲಿ ಪೂಜೆ
Published on

ಸುಂಟಿಕೊಪ್ಪ: ಇಲ್ಲಿನ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಸೋಮವಾರ ಮತ್ತು ಮಂಗಳವಾರ ಅರ್ಚಕ ಮಂಜುನಾಥ್ ಉಡುಪ ಹಾಗೂ ಕೇರಳದ ತಂತ್ರಿ ಶಂಕರ ನಂಬೂದರಿ ತಂಡದಿಂದ
ಗಣಹೋಮ, ಕಳಶಾಭಿಷೇಕ, ತತ್ವಹೋಮ, ಮೃತ್ಯುಂಜಯ ಹೋಮ, ನವಗ್ರಹ ಪೂಜೆ ನೆರವೇರಿಸಲಾಯಿತು.

ದೇವಾಲಯ ಸಮಿತಿ ಅಧ್ಯಕ್ಷ ಪಟ್ಟೆ ಮನೆ ಉದಯ, ಖಜಾಂಚಿ ರಮೇಶ್ ಪಿಳ್ಳೆ, ಕಾರ್ಯದರ್ಶಿ ಪಿ.ಸಿ.ಮೋಹನ, ಸಹ ಕಾರ್ಯದರ್ಶಿ ಯಂಕನ ಕೌಶಿಕ್, ಕೆ.ಪಿ.ಜಗನ್ನಾಥ್, ಜಗದೀಶ್‌ರೈ, ದೀನು ದೇವಯ್ಯ, ಜೆ.ಎನ್.ಚಂದ್ರ ಶೇಖರ್, ಬಿ.ವಿ. ಮಹೇಶ್ ರೈ, ಬಿ.ಡಿ. ರಾಜು ರೈ, ವೀಣಾ ಮಹೇಶ್, ರಮ್ಯಾ ಮೋಹನ್, ಪಿ.ಸಿ.ಸಂದರ್, ಶೈಲಾ, ಪೂರ್ಣ ಸತೀಶ್, ಸೌಮ್ಯಾ ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net