ಪುದ್ದಾರ್ ಮೆಚ್ಚಿ ನೇಮೋತ್ಸವ

New Project (1)
Published on

ಬಂಟ್ವಾಳ: ಸಜೀಪ ಮಾಗಣೆಗೊಳಪಟ್ಟ ಸಜೀಪಮೂಡ ಗ್ರಾಮದ ಸಂಕೇಶ ಭಂಡಾರ ಮನೆಯಲ್ಲಿ ವರ್ಷಂಪ್ರತಿ ಜರುಗುವ ಶ್ರೀ ಉಳ್ಳಾಲ್ದಿ, ಶ್ರೀ ದೈಯಂಗುಳು, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಪುದ್ದಾರ್ ಮೆಚ್ಚಿ ನೇಮೋತ್ಸವದ ಪೂರ್ವಭಾವಿಯಾಗಿ ಸಾಮೂಹಿಕ ದೇವತಾ ಪ್ರಾರ್ಥನೆ ಮಂಗಳವಾರ ನಡೆಯಿತು. ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಗಡಿಪ್ರಧಾನರಾದ ಶಶಿಧರ್ ರೈ ಯಾನೆ ನಾರಾಯಣ ಆಳ್ವ, ಪಾಲೆಮಂಟಪ ಗುತ್ತು, ಕಾಂತಾಡಿ ಗುತ್ತು ಬಿಜಂದಾರ್‌ಗುತ್ತು, ಸಜೀಪ ಗುತ್ತು, ಮಾಡದಾರ ಗುತ್ತು, ನಗ್ರಿ ಗುತ್ತು ಮೊದಲಾದ ಗುತ್ತು ಮನೆತನದವರು, ಸಜೀಪಮೂಡ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್.ಶ್ರೀಕಾಂತ ಶೆಟ್ಟಿ, ದೇವಿ ಪ್ರಸಾದ್ ಪೂಂಜ, ಹರೀಶ್ ರೈ, ಕೋಚ ಪೂಜಾರಿ ಯಾನೆ ಶಂಕರ ಪೂಜಾರಿ, ಕುಂಞ ಪೂಜಾರಿ ಯಾನೆ ದಯಾನಂದ ಪೂಜಾರಿ ಉಪಸ್ಥಿತರಿದ್ದರು. ಪೂರ್ವಶಿಷ್ಟ ಸಂಪ್ರದಾಯದಂತೆ ಕೋಳಿಕುಂಟ ಕಾರ್ಯ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net