

ಮಡಿಕೇರಿ:
ದ್ವಿತೀಯ ಪಿಯುಸಿ ಪರೀಕ್ಷೆ ಮೊದಲ ದಿನವಾದ ಶುಕ್ರವಾರ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲೂ ಪರೀಕ್ಷೆ ಶಾಂತಿಯುತವಾಗಿ ನಡೆದಿದೆ. ಕನ್ನಡ ಪರೀಕ್ಷೆಯಲ್ಲಿ ಎಲ್ಲೂ ನಕಲು ಹೊಡೆದಿರುವುದು ವರದಿಯಾಗಿಲ್ಲ. ಜಿಲ್ಲೆಯ ಒಟ್ಟು 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. 4,439 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ಪೈಕಿ 88 ವಿದ್ಯಾರ್ಥಿಗಳು ಗೈರುಹಾಜರಾಗಿದ್ದು, 4,351 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಶೇ. 98.01ರಷ್ಟು ವಿದ್ಯಾರ್ಥಿಗಳು ಶುಕ್ರವಾರದ ಪರೀಕ್ಷೆ ಬರೆದಿದ್ದಾರೆ.