ಪಿಯುಸಿ ಟಾಪರ್ ಗಗನಾಗೆ ಪ್ರತಿಭಾ ಪುರಸ್ಕಾರ

10 ckm 2
ಚಿಕ್ಕಮಗಳೂರಿನ ಸ್ವಾಸ್ಥ ಭೂಮಿ ಪ್ರತಿಷ್ಟಾನದಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿನಿ ಗಗನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಅನಿಲ್ ಆನಂದ್, ಗುರುಮೂರ್ತಿ, ಗಿರಿಧರ ರಾಜ್‌ಅರಸ್, ಚಂದ್ರಶೇಖರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಾಮಾನ್ಯ ಕುಟುಂಬದ ಗಗನ ತನ್ನ ಪರಿಶ್ರಮ ಹಾಗೂ ಪಾಲಕರ ಸಹಕಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ ಎಂದು ಸ್ವಾಸ್ಥೃಭೂಮಿ ಪ್ರತಿಷ್ಟಾನದ ಅಧ್ಯಕ್ಷ ಅನಿಲ್ ಆನಂದ್ ತಿಳಿಸಿದರು.
ನಗರದ ಪ್ರತಿಷ್ಟಾನದ ಕಚೇರಿಯಲ್ಲಿ ಸಿ.ಎನ್.ಗಗನಾ ಆವರಿಗೆ ಪ್ರತಿಷ್ಟಾನದಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದ ಅವರು, ಗಗನಾ ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸಿದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಿ ವಿದ್ಯಾರ್ಥಿನಿ ಸಿ.ಎನ್.ಗಗನಾ ಮಾತನಾಡಿ, ನಿರಂತರ ಶ್ರಮ ಹಾಗೂ ಪಾಲಕರ ಸಹಕಾರದಿಂದ ಹೆಚ್ಚು ಫಲಿತಾಂಶಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಭವಿಷ್ಯದಲ್ಲಿ ಇನ್ನಷ್ಟು ವಿದ್ಯಾಭ್ಯಾಸದ ಹೆಚ್ಚು ಗಮನಹರಿಸಿ ಪಾಲಕರಿಗೆ ಹಾಗೂ ಸಹಕಾರ ನೀಡಿದ ಸಂಸ್ಥೆಗೆ ಕೀರ್ತಿ ತರಲು ಶ್ರಮಿಸಲಾಗುವುದು ಎಂದರು.
ಸ್ವಾಸ್ಥ ಭೂಮಿ ಪ್ರತಿಷ್ಟಾನದ ಗೌರವಾಧ್ಯಕ್ಷ ಗುರುಮೂರ್ತಿ, ಜೆಸಿಐ ಮಾಜಿ ಅಧ್ಯಕ್ಷ ಗಿರಿಧರ್‌ರಾಜ್ ಅರಸ್, ಪ್ರತಿಷ್ಟಾನದ ಸದಸ್ಯ ಚಂದ್ರಶೇಖರ್, ಕಲಿಯುಗ್ ಇವೆಂಟ್ಸ್ ಮುಖ್ಯಸ್ಥ ದೀಪಕ್, ಮೂಡಿಗೆರೆ ಪಪಂ ಸದಸ್ಯ ಮನೋಜ್, ಪುಷ್ಪವಲ್ಲಿ, ಪೂರ್ಣಿಮಾ ಆನಿಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net