ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ

udp-8-apoorv 3
Published on

ಉಡುಪಿ: ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಸಭೆ, ಡಿಡಿಪಿಯು ಪ್ರತಿ ತಿಂಗಳು ಸಭೆ, ಮೊದಲನೇ ಕಿರುಪರೀೆ ಬಳಿಕ ಅನುತ್ತೀರ್ಣರಾಗಬಹುದಾದ ಮಕ್ಕಳ ಬಗ್ಗೆ ಗಮನಹರಿಸಿ ವಿಶೇಷ ತರಗತಿ... ಹೀಗೆ ವರ್ಷ ಪೂರ್ತಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು ತಂಡವಾಗಿ ಕಾರ್ಯನಿರ್ವಹಿಸಿದ್ದರ ಲವಾಗಿ ರಾಜ್ಯದಲ್ಲೇ ದ್ವೀತಿಯ ಪಿಯುಸಿ ಪರೀೆಯಲ್ಲಿ ಉಡುಪಿ ಜಿಲ್ಲೆ ಮತ್ತೆ ಮೊದಲ ಸ್ಥಾನಕ್ಕೆ ತಲುಪಿದೆ.

ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಕಳೆದ 3 ವರ್ಷದಿಂದ ರಾಜ್ಯದಲ್ಲಿ ದ್ವೀತಿಯ ಸ್ಥಾನ ಪಡೆದಿತ್ತು. ಈ ಬಾರಿ ದ.ಕ. ಜಿಲ್ಲೆ ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದೆ. ಒಟ್ಟು 10 ಮಂದಿ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಟಾಪ್​ 10 ರ್ಯಾಂಕ್​ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಆಸ್ತಿ ಎಸ್​. ಶೆಟ್ಟಿ - (596) 4ನೇ ಸ್ಥಾನ, ಉಡುಪಿ ಜ್ಞಾನ ಸುಧಾ ಕಾಲೇಜಿನ ಅಪೂರ್ವ್​ ವಿ. ಕುಮಾರ್​ (-595), ಎಂಜಿಎಂ ಕಾಲೇಜಿನ ಭೂಮಿಕಾ ಆರ್​. ಹೆಗ್ಡೆ (595), ಕಾರ್ಕಳ ಜ್ಞಾನ ಸುಧಾ ಕಾಲೇಜಿನ -ಶ್ರೀ ರಕ್ಷಾ ಬಿ. ನಾಯಕ್​ (595) 5ನೇ ಸ್ಥಾನ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕಾರ್ಕಳ ಕೆಸ್ಟ್​ ಕಿಂಗ್​ ಕಾಲೇಜಿನ ಸುಧೀಕ್ಷಾ ಶೆಟ್ಟಿ (595), ಉಡುಪಿ ವಿದ್ಯೋದಯ ಪಿಯು ಕಾಲೇಜು ಪ್ರಣವಿ ಎಚ್​. ಸುವರ್ಣ ( 595) 5ನೇ ರ್ಯಾಂಕ್​, ಕಾರ್ಕಳ ಜ್ಞಾನಸುಧಾ ಕಾಲೇಜಿನ ಸಹನಾ ನಾಯಕ್​ (594) ಮತ್ತು ಸುಧಾ ತನ್ವಿ ರಾವ್​ (594) , ಕಟಪಾಡಿ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಅರ್ಚನಾ ಎಸ್​. ಶೆಟ್ಟಿ -6ನೇ ರ್ಯಾಂಕ್​ ಪಡೆದಿದ್ದಾರೆ.

14884 ವಿದ್ಯಾರ್ಥಿಗಳು ಪಾಸ್​

ಜಿಲ್ಲೆಯಲ್ಲಿ ಈ ವರ್ಷ 16127 ಮಂದಿ ವಿದ್ಯಾರ್ಥಿಗಳು ಪರೀೆಗೆ ಹಾಜರಾಗಿದ್ದರು. ಇವರಲ್ಲಿ 14884 ಮಂದಿ ತೇರ್ಗಡೆ ಹೊಂದಿದ್ದಾರೆ. ಕಲಾವಿಭಾಗದಲ್ಲಿ 1150 ವಿದ್ಯಾರ್ಥಿಗಳಲ್ಲಿ 914 ಮಂದಿ, ವಾಣಿಜ್ಯ ವಿಭಾಗದಲ್ಲಿ 7246 ವಿದ್ಯಾರ್ಥಿಗಳಲ್ಲಿ 6503 ಮಂದಿ, ವಿಜ್ಞಾನ ವಿಭಾಗದಲ್ಲಿ 7731 ವಿದ್ಯಾರ್ಥಿಗಳಲ್ಲಿ 7467 ಮಂದಿ ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net