ಪಿಯು ಜಿಲ್ಲೆಗೆ 10ನೇ ಸ್ಥಾನ

shilpashree
puc result
Published on

*ಶಿಲ್ಪಶ್ರೀ ರಾಜ್ಯಕ್ಕೆ 5ನೇ ರ‌್ಯಾಂಕ್

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಗ್ರಾಮಾಂತರ ಜಿಲ್ಲೆ ಶೇ. 87.55 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 10ನೇ ಸ್ಥಾನ ಪಡೆದಿದೆ.
ನೆಲಮಂಗಲ ಹೊಯ್ಸಳ ಕಾಲೇಜಿನ ವಿದ್ಯಾರ್ಥಿನಿ ಶಿಲ್ಪಶ್ರೀ 594 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಟಾರ್ ಆಗಿ ಹೊರಹೊಮ್ಮಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 10048 ವಿದ್ಯಾರ್ಥಿಗಳ ಪೈಕಿ 8488 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆಯು ಶೇ. 84.47 ಫಲಿತಾಂಶ ಪಡೆದಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ 2023-24ನೇ ಸಾಲಿನ(ಪ್ರೆಷರ್) 9371 ವಿದ್ಯಾರ್ಥಿಗಳಲ್ಲಿ 8204 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 87.55 ಫಲಿತಾಂಶ ದೊರಕಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ 4506 ಬಾಲಕರು ಹಾಜರಾಗಿದ್ದು, 3712 ಬಾಲಕರು ತೇರ್ಗಡೆಯಾಗುವ ಮೂಲಕ ಶೇ. 82.38 ಫಲಿತಾಂಶ ಹಾಗೂ ಪರೀಕ್ಷೆಗೆ ಹಾಜರಾದ 5542 ಬಾಲಕಿಯರ ಪೈಕಿ 4776 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ. 86.18 ಫಲಿತಾಂಶ ದೊರಕಿದೆ.
ಕಲಾ ವಿಭಾಗದಿಂದ ಹಾಜರಾದ 1173 ವಿದ್ಯಾರ್ಥಿಗಳ ಪೈಕಿ 734 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 62.57 ಫಲಿತಾಂಶ ಪಡೆದಿದೆ.
ವಾಣಿಜ್ಯ ವಿಭಾಗದಿಂದ 4978 ವಿದ್ಯಾರ್ಥಿಗಳ ಪೈಕಿ 4207 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 84.51 ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಿಂದ 3897 ವಿದ್ಯಾರ್ಥಿಗಳ ಪೈಕಿ 3547 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 91.02 ಫಲಿತಾಂಶ ಬಂದಿದೆ. ನಗರ ಪ್ರದೇಶದ 7840 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 6591 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.84.07 ಫಲಿತಾಂಶ ದೊರೆತರೆ, ಗ್ರಾಮೀಣ ಪ್ರದೇಶದ 2208 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 1897 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.85.91 ಫಲಿತಾಂಶ ದೊರೆತಿದೆ.

ಬಾಲಕಿಯರು ಮೇಲುಗೈ ಕಳೆದ ಸಾಲಿನಲ್ಲಿ ಜಿಲ್ಲೆಯ ಪಿಯುಸಿಯಲ್ಲಿ ಶೇ.83.04 ಲಿತಾಂಶ ಬಂದಿತ್ತು. ಈ ಬಾರಿ 4.51 ಲಿತಾಂಶ ಹೆಚ್ಚಳವಾಗಿದ್ದು ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 446 ರಿಪೀಟರ್ಸ್‌ ವಿದ್ಯಾರ್ಥಿಗಳು, ಖಾಸಗಿಯಾಗಿ 231 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 4506 ಬಾಲಕರು ಹಾಗೂ 5542 ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 9371 ಪ್ರೆಷರ್ಸ್‌ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಶೇ.82.38 ಬಾಲಕರ ಲಿತಾಂಶ ಹೊರಬಿದ್ದಿದ್ದರೆ, ಶೇ.86.18 ಲಿತಾಂಶದೊಂದಿಗೆ ಬಾಲಕಿಯರು ಮುಂದಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದವರ ಪೈಕಿ 102 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಮರು ಪರೀಕ್ಷೆ ಬರೆದವರ ಪೈಕಿ 182 ಮಂದಿ ಪಾಸ್ ಆಗಿದ್ದಾರೆ. ಪರೀಕ್ಷೆ ಬರೆದ ಒಟ್ಟು ಬಾಲಕಿಯರ ಪೈಕಿ 766 ಮಂದಿ ಅನುತ್ತೀರ್ಣರಾಗಿದ್ದು, ಬಾಲಕರ ಪೈಕಿ 794 ಮಂದಿ ೇಲ್ ಆಗಿದ್ದಾರೆ. 10048 ವಿದ್ಯಾರ್ಥಿಗಳ ಪೈಕಿ 8488 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 7768 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದು, 2280 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದಾರೆ. ತೇರ್ಗಡೆಲ್ಲಿ ಆಂಗ್ಲ ಮಾಧ್ಯಮದ ಲಿತಾಂಶ ಶೇ.78.23 ಇದ್ದರೆ ಕನ್ನಡ ಮಾಧ್ಯಮ ಲಿತಾಂಶ ಶೇ.69.78 ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net