ದ್ವಿತೀಯ ಪಿಯುಸಿ ಸಾಧಕಗೆ ಸಮಾಜ ಕಲ್ಯಾಣ ಇಲಾಖೆ ಸನ್ಮಾನ

PUC Student Honour
ಹರಪನಹಳ್ಳಿಯ ಸಮಾಜ ಕಲ್ಯಾಣ ಇಲಾಖಾ ಕಚೇರಿಯಲ್ಲಿ ನಿರ್ದೇಶಕಿ ರೇಣುಕಾದೇವಿ ಮತ್ತಿತರರು ಪಿಯುಸಿ ಸಾಧಕ ಓಂಪತಿಯನ್ನು ಸನ್ಮಾನಿಸಿದರು.
Published on

ಹರಪನಹಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ‌್ಯಾಂಕ್ ಗಳಿಸಿದ (600 ಕ್ಕೆ 587 ಅಂಕ) ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ, ನಂ.2 ವಸತಿನಿಲಯದ ವಿದ್ಯಾರ್ಥಿ ಓಂಪತಿಯನ್ನು ಇಲಾಖಾ ಕಚೇರಿಯಲ್ಲಿ ಸೋಮವಾರ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಓಪತಿ, ನಾನು ಕೃಷಿ ಕುಟುಂಬದಿಂದ ಬಂದಿದ್ದೇನೆ. 2 ವರ್ಷ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಸೌಲಭ್ಯ ಪಡೆದು ಅಭ್ಯಾಸ ಮಾಡಿದ್ದೇನೆ. ಅಧಿಕಾರಿಗಳು, ವಾರ್ಡನ್‌ಗಳು, ಸಿಬಂಧಿ ಉತ್ತಮ ಮಾರ್ಗದರ್ಶನ ನೀಡಿದ್ದಾರೆ ಎಂದು ಸ್ಮರಿಸಿದರು. ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ರೇಣುಕಾದೇವಿ, ಪ್ರಮುಖರಾದ ಸುನೀತಾ, ಎಸ್.ಜಿ.ರವಿಗೌಡರ, ಯಲ್ಲಮ್ಮ, ಸುಮಾ, ಇಬ್ರಾಹಿಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net