ಸುಸೂತ್ರ ಜರುಗಿದ ಪಿಯುಸಿ ಪರೀಕ್ಷೆ

Published on

ಬಳ್ಳಾರಿ : ರಾಜ್ಯಾದ್ಯಂತ ಆರಂಭವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 1,057 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಅವಳಿ ಜಿಲ್ಲೆಯಲ್ಲಿ 43 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಬಳ್ಳಾರಿ 6336, ಸಿರಗುಪ್ಪ 1576, ಸಂಡೂರು 1054, ಕಂಪ್ಲಿ 822, ಕುರುಗೋಡು 469, ಹೊಸಪೇಟೆ 3454,ಹರಪನಹಳ್ಳಿ 2537, ಹೂವಿನಹಡಗಲಿ 1379, ಕೂಡ್ಲಿಗಿ 1156, ಹಗರಿಬೊಮ್ಮನಹಳ್ಳಿ 1911, ಕೊಟ್ಟೂರು 2,209 ಸೇರಿದಂತೆ ಒಟ್ಟಾರೆ 22,903 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಒಟ್ಟಾರೆ ಕನ್ನಡ ವಿಷಯಕ್ಕೆ 23,960 ನೊಂದಾಯಿಸಿಕೊಂಡಿದ್ದು, 1057 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ ಎಂದು ಡಿಡಿಪಿಯು ಟಿ.ಪಾಲಾಕ್ಷ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net