

ಸಿದ್ದಾಪುರ: ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿನ ದೊಡ್ಡ ದೊಡ್ಡ ಹೊಂಡ ಬಿದ್ದ ಸ್ಥಳದಲ್ಲಿ ಮರುಡಾಂಬರೀಕರಣ ಕಾಮಗಾರಿ ಕೈಗೊಂಡು ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದೆ.
ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಪರದಾಟ, ವಾಹನ ಸವಾರಿರಗೆ ನಿತ್ಯವೂ ಕಿರಿಕಿರಿ ಶೀರ್ಷಿಕೆಯಡಿ ವಿಜಯವಾಣಿ ಜ.18ರಂದು ವರದಿ ಪ್ರಕಟಿಸಿತ್ತು.
ಸ್ಪಂದಿಸಿದ ರಾಜ್ಯ ಹೆದ್ದಾರಿ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯು ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ಅತಿ ಹೆಚ್ಚು ಹೊಂಡ ಬಿದ್ದು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದ ಭುವನಗಿರಿ ಸಮೀಪ ಸಿದ್ದಾಪುರ ಲೋಕೋಪಯೋಗಿ ಇಲಾಖೆ ಮರುಡಾಂಬರೀಕರಣ ಮಾಡುವುದರ ಮೂಲಕ ಅನುಕೂಲಮಾಡಿಕೊಟ್ಟಿದೆ. ಈ ಹೆದ್ದಾರಿಯ ಬೇಡ್ಕಣಿ ಹಾಗೂ ಬಿಳಗಿ ಸಮೀಪವೂ ಮರುಡಾಂಬರೀಕರಣ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.