ಮೆಟ್ರಿ ಗ್ರಾಮದಲ್ಲಿ ಸಾರ್ವಜನಿಕ ಮಹಿಳಾ ಶೌಚಗೃಹ ನಿರ್ಮಿಸಿ

mnv
ಮೆಟ್ರಿ ಗ್ರಾಮದಲ್ಲಿ ಪಿಡಿಒ ಶ್ರೀಶೈಲಗೌಡಗೆ ಬುಧವಾರ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಮಾಲಾಶ್ರೀ, ಈರಮ್ಮ, ಹುಲಿಗೆಮ್ಮ, ಚೆನ್ನಬಸಮ್ಮ, ಲಕ್ಷ್ಮೀ, ಬಸಮ್ಮ, ಮಾಯಮ್ಮ, ಶಾಂತಕುಮಾರ್, ಹನುಮಂತಪ್ಪ, ಬಸವರಾಜ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಪಿಡಿಒ ಶ್ರೀಶೈಲಗೌಡಗೆ ಮನವಿ ಸಲ್ಲಿಸಿದರು.


ಮೆಟ್ರಿ ಗ್ರಾಮದ 5 ಹಾಗೂ 6ನೇ ವಾರ್ಡ್‌ನಲ್ಲಿ ಸಾರ್ವಜನಿಕ ಶೌಚಗೃಹವಿಲ್ಲ, ಸ್ವಂತ ಮನೆಯುಳ್ಳ ಅನುಕೂಲಸ್ಥರು ಮಾತ್ರ ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡಿದ್ದಾರೆ. ಇಲ್ಲದವರು ಬಯಲು ಬಹಿರ್ದೆಸೆಗೆ ತೆರಳುವುದು ಕಷ್ಟವಾಗಿದೆ. ಆದ್ದರಿಂದ ಸಾರ್ವಜನಿಕ ಮಹಿಳಾ ಶೌಚಗೃಹ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.


ಪಿಡಿಒ ಶ್ರೀಶೈಲಗೌಡ ಮಾತನಾಡಿ, ಪೇ ಆ್ಯಂಡ್ ಯೂಸ್ ಮಾದರಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಗೃಹ ನಿರ್ಮಿಸಲು ಶಾಸಕರು ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಗ್ರಾಮಸ್ಥರಾದ ಮಾಲಾಶ್ರೀ, ಈರಮ್ಮ, ಹುಲಿಗೆಮ್ಮ, ಚೆನ್ನಬಸಮ್ಮ, ಲಕ್ಷ್ಮೀ, ಬಸಮ್ಮ, ಮಾಯಮ್ಮ, ಶಾಂತಕುಮಾರ್, ಹನುಮಂತಪ್ಪ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net