ದೌರ್ಜನ್ಯ ಹತ್ತಿಕ್ಕುವಲ್ಲಿ ಸರ್ಕಾರ ವಿಫಲ

MKG1
Published on

ಹೊನ್ನಾಳಿ: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಹತ್ತಿಕ್ಕುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ತಾಲೂಕು ಪ್ರಜಾ ಪರಿವರ್ತನಾ ವೇದಿಕೆ ಮುಖಂಡರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಜಾಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ. ಈಶ್ವರಪ್ಪ ಮಾತನಾಡಿ, ಮಣಿಪುರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ದಲಿತರು, ಆದಿವಾಸಿಗಳು ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಸಹ ದಲಿತರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಮಣಿಪುರದಲ್ಲಿ ಕಳೆದ 3 ತಿಂಗಳಿನಿಂದ ಜನಾಂಗೀಯ ಘರ್ಷಣೆ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಇದಕ್ಕೂ ನನಗೂ ಏನೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ಇವರ ನಿರ್ಲಕ್ಷೃತನದಿಂದ ಅಲ್ಲಿನ ಹೆಣ್ಣು ಮಕ್ಕಳ ಮೇಲೆ ದುರುಳರು ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ. ಅವರನ್ನು ಬಂಧಿಸಿ ಎಂದು ಆಗ್ರಹಿಸಿದರು.

ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಅರಕೆರೆ, ತಾಲೂಕು ಅಧ್ಯಕ್ಷ ಕೆ.ಓ. ಹನುಮಂತಪ್ಪ, ರೇಣುಕಮ್ಮ ಮಾತನಾಡಿದರು.
ಸಿದ್ದಪ್ಪ, ಎನ್. ಲೋಕೇಶ್, ಪಕ್ಕೀರಪ್ಪ, ಶಿವಮೂರ್ತಿ, ಹೇಮಮ್ಮ, ಗೌರಮ್ಮ, ಇರ್ಫಾನ್‌ಬಾಷಾ, ಜೀವನ್, ಮಂಜು, ರೇಣುಕಾ, ಜಗದೀಶ್, ಕವಿತಾ, ಮಹೇಶ್, ತಿಪ್ಪೇಶ್, ಆಶಾ, ಮಿನಾಕ್ಷಮ್ಮ, ಲತಾ ಇತರರು ಇದ್ದರು.ಪ್ರಜಾ ಪರಿವರ್ತನಾ ವೇದಿಕೆ ಮನವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net