ಸಮಾಜ ಸೇವೆಗೆ ಸಾರ್ವಜನಿಕ ಕ್ಷೇತ್ರ ಉತ್ತಮ: ಉಪವಿಭಾಗಾಧಿಕಾರಿ ಎಚ್.ಬಿ.ವಿಜಯ್‌ಕುಮಾರ್

1
Published on

ಮೈಸೂರು: ಜನರಿಗೆ ಹತ್ತರವಾಗಿ ಅನುಕೂಲ ಮಾಡಿಕೊಡಲು ಸಾರ್ವಜನಿಕ ಸೇವಾ ಕ್ಷೇತ್ರ ಉತ್ತಮ ಆಯ್ಕೆ ಎಂದು ಹುಣಸೂರು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯ್‌ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಮಂಗಳವಾರ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾವಲಂಬನೆಯತ್ತ ಯುವ ಸಮುದಾಯ ಸ್ಪರ್ಧಾತ್ಮಕ ಪರೀಕ್ಷೆೆಗಳ ಒಂದು ದಿನದ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಸೇವೆ ಮಾಡಲು ನಾನಾ ದಾರಿಗಳಿವೆ. ಆದರೆ, ಜನರಿಗೆ ಅಗತ್ಯವಾದ ಸೌಲಭ್ಯ ನೀಡಲು ಸಾರ್ವಜನಿಕ ಆಡಳಿತ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಸಮಾಜಕ್ಕೆೆ ಉತ್ತಮ ಕೊಡುಗೆ ನೀಡಬಹುದು. ಅಂತಹ ಅವಕಾಶಗಳು ಈ ಕ್ಷೇತ್ರದಲ್ಲಿ ಹೇರಳವಾಗಿವೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇದೆ. ಶಾಸಕಾಂಗ ಜಾರಿ ಮಾಡುವ ಯೋಜನೆಗಳು, ಶಾಸನಗಳನ್ನು ತಳಮಟ್ಟದಲ್ಲಿ ತಲುಪಿಸಲು ಸಾರ್ವಜನಿಕ ಸೇವೆ ಅಗತ್ಯವಾಗಿದೆ. ಅಧಿಕಾರಿಯಾಗಿ ಬಡತನ ನಿರ್ಮೂಲನೆ, ಸಾಕ್ಷರತೆ, ಪರಿಸರ ಅಭಿವೃದ್ಧಿ ಮಾಡಬಹುದಾಗಿದೆ. ಸರ್ಕಾರ ಮತ್ತು ಜನರ ಸೇತುವೆಯಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.

ಪ್ರತಿ ವಿದ್ಯಾರ್ಥಿ ಓದಿನೊಂದಿಗೆ ತಮ್ಮ ಭವಿಷ್ಯದ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಸ್ಪಷ್ಟ ನಿರ್ಧಾರದೊಂದಿಗೆ ಕಠಿಣ ಪರಿಶ್ರಮ ಮತ್ತು ಗುರುಗಳ ಮಾರ್ಗದರ್ಶನದೊಂದಿಗೆ ತಮ್ಮ ಗುರಿ ತಲುಪುವ ಕಡೆ ಲಕ್ಷ್ಯವಿಟ್ಟುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆೆಗೆ ಸಿದ್ಧತೆ ನಡೆಸುವ ಎಲ್ಲರಿಗೂ ಉದ್ಯೋಗ ದೊರೆಯುವುದಿಲ್ಲ. ಯುಪಿಎಸ್‌ಸಿ ಕಡಿಮೆ ಸಂಖ್ಯೆೆಯ ಉದ್ಯೋಗಕ್ಕೆೆ ಪರೀಕ್ಷೆೆ ನಡೆಸುತ್ತದೆ. ಅಗಾಧವಾದ ಸ್ಪರ್ಧೆ ಇರುತ್ತದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆೆಗೆ ಪಡೆದ ಜ್ಞಾನ ಎಂದೂ ವ್ಯರ್ಥವಾಗುವುದಿಲ್ಲ. ಜೀವನ ಎದುರಿಸುವ ಸ್ಥೈರ್ಯ ಮತ್ತು ಧೈರ್ಯವನ್ನು ಈ ತರಬೇತಿ ಕೊಡುತ್ತದೆ ಎಂದರು.

ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಪ್ರೊ.ಸಿ.ಗುರುಸಿದ್ದಯ್ಯ ಮಾತನಾಡಿ, ಪ್ರಾಮಾಣಿಕತೆ, ಶ್ರದ್ಧೆೆ, ನಿರಂತರವಾದ ಪರಿಶ್ರಮ ಇದ್ದರೆ ಬದುಕಿನಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರಕುಮಾರ್, ಐಕ್ಯೂಎಸಿ ನಿರ್ದೇಶಕ ಡಾ.ಕೆ.ಎನ್.ಅಮೃತೇಶ್ ಮಾತನಾಡಿದರು. ಮಾನಸಿಕ ಸಾಮರ್ಥ್ಯ ಕುರಿತು ಬೆಂಗಳೂರಿನ ಆ್ಯಕ್ಟಿವ್ ಕೋಚಿಂಗ್ ಸೆಂಟರ್ ನಿರ್ದೇಶಕ ಮಂಜುನಾಥ್ ಬಾಡಗಿ, ಸಾಮಾನ್ಯ ಜ್ಞಾನ ಕುರಿತು ಅನ್ ಅಕಾಡೆಮಿ ಉಪನ್ಯಾಸಕ ಶರಣಯ್ಯ ಭಂಡಾರಿಪುರ ಮಾತನಾಡಿದರು.

ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್, ಕಾರ್ಯದರ್ಶಿಗಳಾದ ಶೇಖರ್, ಕಾತ್ಯಾಯಿಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net