ಚಿಕ್ಕಮಂಡ್ಯದಲ್ಲಿ ಪಬ್ಲಿಕ್ ಶಾಲಾರಂಭಕ್ಕೆ ಪ್ರಸ್ತಾವನೆ

21_11_Mdy_Mla Srinivas
Published on

ಮಂಡ್ಯ: ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯಲ್ಲೂ ಪಬ್ಲಿಕ್ ಶಾಲೆ ಪ್ರಾರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಆರ್‌ಐಡಿಎಲ್ ವತಿಯಿಂದ ನಿರ್ಮಿಸುತ್ತಿರುವ 13.25 ಲಕ್ಷ ರೂ. ವೆಚ್ಚದ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪಬ್ಲಿಕ್ ಶಾಲೆ ಪ್ರಾರಂಭವಾದಲ್ಲಿ ಸುತ್ತಮುತ್ತಲ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಬೈಪಾಸ್ ರಸ್ತೆ ಚಿಕ್ಕಮಂಡ್ಯ ಗ್ರಾಮದ ಮೂಲಕ ಹಾದು ಹೋಗುತ್ತಿದೆ. ಮಂಡ್ಯ ಮಹಾನಗರ ಪಾಲಿಕೆಯಾದಲ್ಲಿ ಮೊದಲ ಹಂತದಲ್ಲೇ ಈ ಭಾಗದಿಂದಲೂ ಒಬ್ಬ ಕಾರ್ಪೋರೇಟರ್ ಆಯ್ಕೆಯಾಗುತ್ತಾರೆ ಎಂದು ತಿಳಿಸಿದರು.
ಶಾಲೆಯ ಆವರಣದಲ್ಲಿ ವಿಶಾಲವಾದ ಜಾಗವಿದ್ದು, ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಿ 1 ರಿಂದ 12ನೇ ತರಗತಿ ಪ್ರಾರಂಭಿಸಲು ಉತ್ತಮ ವಾತಾವರಣವಿದೆ. ಈ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಿವಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತಾ, ಲಕ್ಷ್ಮಣ, ರಾಮಣ್ಣ, ಕಾಳೇಗೌಡ, ಪುಟ್ಟಸ್ವಾಮಿ, ಪ್ರದೀಪ್ ಪಟೇಲ್, ರಾಮೇಗೌಡ, ಬೋರೇಗೌಡ, ಸಾತನೂರು ಮಹೇಶ್, ಇಕ್ಕಲಕ್ಕಿ ಸಂತೋಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net