ಕಾರ್ಕಳದಲ್ಲಿ ಜನಸಂಪರ್ಕ ಅಭಿಯಾನ

jana samparka sabhe
ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಇತ್ತೀಚೆಗೆ ಕಾರ್ಕಳದಲ್ಲಿ ನಡೆಯಿತು.
Published on

ಕಾರ್ಕಳ: ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಭಾರತಿ ಅಂಚೆ ಇಲಾಖೆ ಪುತ್ತೂರು ವಿಭಾಗ, ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಕಾರ್ಕಳದ ಬಿ.ಆರ್.ಸಿಯಲ್ಲಿ ಇತ್ತೀಚೆಗೆ ನಡೆಯಿತು. ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್ ಅಭಿಯಾನ ಉದ್ಘಾಟಿಸಿದರು. ಕಾರ್ಕಳ ಟೈಗರ್ಸ್‌ನ ಸೇವಾ ಮನೋಭಾವ ಕುರಿತು ರಮಿತಾ ಶೈಲೇಂದ್ರ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಕಾರ್ಕಳ ಟೈಗರ್ಸ್‌ನ ಸದಸ್ಯರಾದ ಪ್ರದೀಪ್ ಶೃಂಗಾರ ಮತ್ತು ಶ್ರೀನಾಥ್ ಆಚಾರ್ಯ, ಪ್ರವೀಣ್ ಕುಲಾಲ್, ಅರುಣ್, ಉಪಸ್ಥಿತರಿದ್ದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net