

ಕಕ್ಕೇರಿ: ಗ್ರಾಪಂನಲ್ಲಿ ಎಲ್ಲ ಸದಸ್ಯರು ಸೇರಿ ಒಗ್ಗಟ್ಟಿನಿಂದ ಅಭಿವೃದ್ಧಿ ಕಾಮಗಾರಿ ಕೈಗೊಂಡಾಗ ಅದು ಜನರ ಮನ್ನಣೆ ಪಡೆಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ ಎನ್ಆರ್ಎಲ್ಎಂ ಹಾಗೂ ಎಸ್ಎಲ್ಡಬ್ಲ್ಯೂಎಂ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶಾಸಕ ವಿಠ್ಠಲ ಹಲಗೆಕರ ಮಾತನಾಡಿ, ಲಿಂಗನಮಠ ಗ್ರಾಪಂ ಅಧ್ಯರು ಹಾಗೂ ಆಡಳಿತ ಮಂಡಳಿಯ ಎಲ್ಲರನ್ನು ಒಗ್ಗೂಡಿಸಿಕೊಂಡು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕೇವಲ ನಾಲ್ಕುವರೆ ವರ್ಷದಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಭೂದಾನ ನೀಡಿದ ದಿ. ಸಿದ್ದಪ್ಪ ಮುಗಳಿಹಾಳ ದಂಪತಿಯನ್ನು ಸನ್ಮಾನಿಸಲಾಯಿತು. ಚನ್ನಬಸವ ದೇವರು, ಬಸಯ್ಯ ಹಿರೇಮಠ, ತಾಪಂ ಇಒ ರಮೇಶ ಮೇತ್ರಿ, ಗ್ರಾಪಂ ಅಧ್ಯ ಕಾಶೀಮ ಹಟ್ಟಿಹೋಳಿ, ಉಪಾಧ್ಯಕ್ಷೆ ಸರೋಜಾ ನಾಯ್ಕ, ಸದಸ್ಯರಾದ ರಾಜು ರಪಾಟಿ, ಪಾಂಡುರಂಗ ಪಾಟೀಲ, ಮಾರುತಿ ಹರಿಜನ, ಬೈರು ಮಾಂದವಿ, ಮುಬಾರಕ ಚಿಕ್ಕೋಡಿ, ಶೋಭಾ ಮಾಟೊಳ್ಳಿ, ಶಾಂತವ್ವ ಹಿರೇಮಠ, ರತ್ನವ್ವ ಮಾಟೊಳ್ಳಿ, ಾತಿಮಾ ಅಳವಾಡ, ಬಿಬಿಹಾಜರಾ ದಾಸ್ತಿಕೊಪ್ಪ, ಸೋನಾಬಾಯಿ ವಾಯದಂಡೆ, ಸರೋಜಾ ಬಾಗೇವಾಡಿ, ಮಹಾಂತೇಶ ಸಂಗೊಳ್ಳಿ, ಬಾಬು ಬಿಜಾಪುರ ಇತರರಿದ್ದರು. ಗ್ರಾಪಂ ಪಿಡಿಒ ಕಾವೇರಿ ಹಿಮಕರ ಸ್ವಾಗತಿಸಿದರು. ಶಿಕರಾದ ಮೌಲಾಸಾಬ ಉಗ್ನಿಕೇರಿ ನಿರೂಪಿಸಿದರು. ಪುಂಡಲೀಕ ಸನ್ನಾರ ವಂದಿಸಿದರು.