ಸಾರ್ವಜನಿಕ ಸ್ಥಳಗಳು ಫುಲ್ ಕ್ಲೀನ್

1-ANP-P1
ಆನಂದಪುರ ಸಮೀಪದ ಯಡೇಹಳ್ಳಿಯ ಬಸ್ ನಿಲ್ದಾಣದ ಆವರಣದಲ್ಲಿ ಶ್ರಮದಾನ ಮಾಡಲಾಯಿತು.
Published on

ಆನಂದಪುರ: ಇಲ್ಲಿನ ಗ್ರಾಪಂ ಆಡಳಿತ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಬಸ್ ನಿಲ್ದಾಣದಿಂದ ಹಳೆ ಪೊಲೀಸ್ ಠಾಣೆ ವೃತ್ತದವರೆಗೆ ಮತ್ತು ಕೆಪಿಎಸ್ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ರೂಪಾ ನಾಗರಾಜ್, ಪಿಡಿಒ ಹನ್ೀ, ಗ್ರಾಪಂ ಸದಸ್ಯರು, ಸಿಬ್ಬಂದಿ, ಆಶಾ ಕಾರ್ಯರ್ತರು, ಅಂಗನವಾಡಿ ಶಿಕ್ಷಕಿಯರು, ರಾಯಲ್ ಕ್ಲಬ್ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಯಡೇಹಳ್ಳಿಯ ಬಸ್‌ನಿಲ್ದಾಣ ಆವರಣದಲ್ಲಿ ಎಂಎನ್‌ಕೆ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ, ರಾಯಲ್ ಕ್ಲಬ್ ಸದಸ್ಯರು ಶ್ರಮದಾನ ನಡೆಸಿದರು.
ಯಡೇಹಳ್ಳಿ, ಆಚಾಪುರ, ಹೊಸೂರು ಮತ್ತು ಗೌತಮಪುರ ಗ್ರಾಪಂ ವ್ಯಾಪ್ತಿಯಲ್ಲೂ ಶ್ರಮದಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net