ಗ್ರೇಟರ್​ ಬೆಂಗಳೂರು ಕಾಯ್ದೆ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ: BBMP ಪೂರ್ವವಲಯದ ಆಯುಕ್ತ ಸ್ನೇಹಲ್‌ ಹೇಳಿಕೆ | Greater Bengaluru

Greater Bengaluru
Published on

Greater Bengaluru: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಸರ್ಕಾರಿ ಸಂಸ್ಥೆಗಳ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಕೂಡು ತುಂಬಾ ಅಗತ್ಯವಾಗಿದೆ ಎಂದು ಬಿಬಿಎಂಪಿ ಪೂರ್ವವಲಯದ ಆಯುಕ್ತ ಸ್ನೇಹಲ್ ರಾಯಮಾನೆ ಅವರು ಹೇಳಿದರು.

ವಿಶ್ವ ಪರಿಸರ ದಿನಾಚರಣೆ (ಜೂನ್​ 05) ಪ್ರಯುಕ್ತ ವಿಐಎಂಒವಿಇ ಪ್ರತಿಷ್ಠಾನ ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 'ಅಲ್ಟ‌ರ್ ನೇಟಿವ್-2025' ಕ್ರಮದ ಸುಸ್ಥಿರ ಗ್ರೇಟರ್ ಬೆಂಗಳೂರು-ಸಾರ್ವಜನಿಕರ ಅಭಿಪ್ರಾಯಗಳು ಕುರಿತ ಗುಂಪು ಚರ್ಚೆಯಲ್ಲಿ ಸ್ನೇಹಲ್​ ರಾಯಮಾನೆ ಮಾತನಾಡಿದರು.

ಯಾವುದೇ ಹೊಸ ವ್ಯವಸ್ಥೆಗಳು ಜಾರಿಯಾಗುವ ಆರಂಭದಲ್ಲಿ ಸಮಸ್ಯೆಗಳು ಸಾಮಾನ್ಯ. ಸಾರ್ವಜನಿಕರಿಗೆ ಸಮಸ್ಯೆಗಳಾಗದಂತೆ ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಈಗಾಗಲೆ ರೂಪುರೇಷೆಗಳನ್ನು ಪಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅನುಷ್ಟಾನಗೊಳಿಸಲಾಗುವುದು ಎಂದು ಸ್ನೇಹಲ್​ ರಾಯಮನೆ ಹೇಳಿದರು.

Greater Bengaluru

ಇದೇ ವೇಳೆ ಅಲ್ಟರ್​ ನೇಟಿವ್- 2025 ಕಾರ್ಯಕ್ರಮದ ಕ್ಯುರೇಟರ್ ಮತ್ತು ಸುದ್ದಿಗೋಷ್ಠಿ ನಿರ್ವಾಹಕ ವಿನಯ್ ಶಿಂದೆ, ಗ್ರೇಟರ್ ಬೆಂಗಳೂರು ಕಾಯ್ದೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸುವ ಕುರಿತ ಪತ್ರವನ್ನು ಬೆಂಗಳೂರು ಉಸ್ತುವಾರಿ ಸಚಿವರಿಗೆ ತಲುಪಿಸುವಂತೆ ಕೋರಿ ವಲಯ ಆಯುಕ್ತರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುಸ್ಥಿರ ಬೆಂಗಳೂರು ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಸಾಧಕರಿಗೆ 'ನಮ್ಮ ಅರ್ಥ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರೇಟರ್ ಬೆಂಗಳೂರಿನ ಪರಿಸರ ನಡೆಗಾಗಿ ಗೀತಾಶಿಂದೆ ಬೆನಗಿ ಅವರ ನೃತ್ಯ ಸಂಯೋಜನೆ ಆಕರ್ಷಕವಾಗಿತ್ತು. ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ರೇವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎನ್​. ರಮೇಶ್​ ಮತ್ತಿತರರು ಹಾಜರಿದ್ದರು.

Greater Bengaluru
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net