

ಸುಳ್ಯ: ತಾಲೂಕು ಮೀಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಸಾರಿದ ಮಿಲಾದ್ ಕಾಲ್ನಡಿಗೆ ಜಾಥಾ ಮತ್ತು ಸಭಾ ಕಾರ್ಯಕ್ರಮ ಗಾಂಧಿನಗರದಲ್ಲಿ ಇತ್ತೀಚೆಗೆ ನಡೆಯಿತು.
ಸಾರ್ವಜನಿಕ ಸಭಾ ಕಾರ್ಯಕ್ರಮವನ್ನು ಸಯ್ಯದ್ ಕುಂಞಿ ಕೋಯ ಸಅದಿತಂಳ್ ಉದ್ಘಾಟಿಸಿದರು. ಸಯ್ಯದ್ ತ್ವಾಹಿರ್ ಸಅದಿ ತಂಳ್ ದುಃವಾ ನೆರವೇರಿಸಿದರು.
ಕೇರಳದ ವಾಗ್ಮಿ ನವಾಝ್ ಮನ್ನಾನಿ ತಿರುವನಂತಪುರಂ ಮುಖ್ಯ ಪ್ರಭಾಷಣ ಮಾಡಿದರು. ವಾಗ್ಮಿ ಎಸ್.ಎಂ.ಬಶೀರ್ ಅಹ್ಮದ್ ಮಂಜೇಶ್ವರ, ಹುಸೇನ್ ಅಹ್ಸನಿ ಅಲ್ ಮುಈನಿ ಮೂರ್ನಾಡ್, ರಿಯಾಝ್ ಕಡಂಬು ಮಾತನಾಡಿದರು.
ಪ್ರಮುಖರಾದ ಟಿ.ಎಂ.ಶಹೀದ್ ತೆಕ್ಕಿಲ್, ಕೆ.ಎಂ.ಮುಸ್ತಫಾ ಜನತಾ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಬ್ದುಲ್ ಕಲಾಂ, ಮಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ ಮಜೀದ್ ಜನತಾ, ಹಾಜಿ ಅಬೂಬಕ್ಕರ್ ಮಂಗಳ, ಎಸ್.ಸಂಶುದ್ದೀನ್ ಅರಂಬೂರು, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಜಿ.ಕೆ.ಹಮೀದ್, ತಾಜ್ ಮಹಮ್ಮದ್ ಸಂಪಾಜೆ, ಹಮೀದ್ ಸುಣ್ಣಮೂಲೆ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬ್ದುಲ್ ರಜ್ಜಾಕ್ ಕರಾವಳಿ, ಹಾಜಿ ಬಿ.ಎಂ.ಅಬೂಬಕ್ಕರ್ ಮೊದಲಾದವರಿದ್ದರು.
ಮಿಲಾದ್ ಸಮಿತಿ ಅಧ್ಯಕ್ಷ ಜುನೈದ್ ಎನ್.ಎ., ಸಂಚಾಲಕ ಕೆ.ಎಸ್.ಉಮ್ಮರ್, ಉಪಾಧ್ಯಕ್ಷರಾದ ರಶೀದ್ ಜಟ್ಟಿಪಳ್ಳ, ಕಾರ್ಯದರ್ಶಿ ಅಝೀಝ್ ಸಂಗಮ್, ಮುನಾಫರ್ ಸುಳ್ಯ, ಮಿರಾಝ್ ಸುಳ್ಯ, ಅಬ್ದುಲ್ ಖಾದರ್ ಸಂಗಂ, ಇಕ್ಬಾಲ್ ಸುಣ್ಣಮೂಲೆ, ನವಾಜ್ ಜಯನಗರ, ನೌಶಾದ್ ಕೆರೆಮೂಲೆ ಮೊದಲಾದವರಿದ್ದರು. ಮೀಲಾದ್ ಸಮಿತಿ ಕೋಶಾಧಿಕಾರಿ ಉನೈಸ್ ಪೆರಾಜೆ ಸ್ವಾಗತಿಸಿದರು. ಅಧ್ಯಕ್ಷ ಜುನೈದ್ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಮಿಲಾದ್ ಕಾಲ್ನಡಿಗೆ ಜಾಥಾ ನಡೆಯಿತು.