

ದೇವದುರ್ಗ: ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಬಿ.ವಿ.ನಾಯಕ 58ನೇ ಜನ್ಮನಿದ ನಿಮಿತ್ತ ಬಿ.ವಿ.ನಾಯಕ ಅಭಿಮಾನಿಗಳ ಬಳಗದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವೀಲ್‌ಚೇರ್ ಶುಕ್ರವಾರ ವಿತರಣೆ ಮಾಡಲಾಯಿತು.
ವಕೀಲ ವಿ.ಎಂ.ಮೇಟಿ ಮಾತನಾಡಿ, ಬಿ.ವಿ.ನಾಯಕ ಜನ್ಮದಿನ ನಿಮಿತ್ತ ಹಲವು ಸಮಾಜಮುಖಿ ಕೆಲಸ ಹಮ್ಮಿಕೊಂಡಿದ್ದು ಆಸ್ಪತ್ರೆ ರೋಗಗಳಿಗೆ ಹಾಲು, ಹಣ್ಣು, ಬ್ರೆಡ್ ಕಿಟ್ ನೀಡಲಾಗಿದೆ. ಅಲ್ಲದೆ ಆಸ್ಪತ್ರೆಗೆ ಬರುವ ಹಿರಿಯ ಹಾಗೂ ಅಂಗವಿಕಲ ರೋಗಿಗಳ ಅನುಕೂಲಕ್ಕಾಗಿ ಐದು ವೀಲ್ ಚೇರ್ ನೀಡಲಾಗಿದೆ. ಸಿಬ್ಬಂದಿ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.
ವಕೀಲ ಹನುಮೇಶ ನಾಯಕ, ಪ್ರಮುಖರಾದ ವೆಂಕಟೇಶ ನಾಯಕ, ಸೋಮಕಾರ, ಭಗಯ್ಯ ನಾಯಕ ಗೌರಂಪೇಟೆ, ಗೋಪಾಲಕೃಷ್ಣ ನಾಯಕ, ಸುರೇಶನಾಯಕ, ರಫಿ ಇತರರಿದ್ದರು.