ಆರೋಗ್ಯದತ್ತ ಇರಲಿ ಚಿತ್ತ

dj brm health camp
Published on

ಭರಮಸಾಗರ: ಬಡ ನಿರ್ಗತಿಕರ ಅನುಕೂಲಕ್ಕಾಗಿ ಸರ್ಕಾರದಿಂದ ಆರೋಗ್ಯ ಮೇಳ ಆಯೋಜಿಸಲಾಗುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ.ಪ್ರವೀಣ್ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೇಳವನ್ನು ಉದ್ಘಾಟಿಸಿ ಮಾತನಾಡಿ, ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ಮುನ್ನೇಚ್ಚರಿಕೆ ಕ್ರಮ ನೆಮ್ಮದಿ ಬದುಕಿಗೆ ರಹದಾರಿ ಎಂದರು.

ಬಡವರು ಉಚಿತವಾಗಿ ಆರೋಗ್ಯ ಸೇವೆ ಪಡೆಯಬೇಕು ಎಂಬ ಉದ್ದೇಶದಿಂದ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡು ಸ್ವಾಸ್ಥೃ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯ ತಪಾಸಣೆ, ಉಚಿತ ಕನ್ನಡಕ ವಿತರಣೆ, ಹಾಗೂ ರಕ್ತಪರೀಕ್ಷೆಗಳನ್ನು ನಡೆಸಲಾಯಿತು. ಗ್ರಾಪಂ ಸದಸ್ಯ ರುದ್ರೇಶ್, ದಂತ ವೈದ್ಯ ಡಾ.ಮೋಹನ್, ಡಾ.ನಾಗರಾಜ್, ಡಾ.ಉಮೇಶ್ ರೆಡ್ಡಿ, ಡಾ.ಮಂಜುನಾಥ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುಧಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಂಬಾಳಿ ಮಠ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆಂಜನೇಯ, ಮಂಜುಳಮ್ಮ, ಹರೀಶ್, ಚಂದ್ರಶೇಖರ್, ಸುನಂದಮ್ಮ, ಶಿಲ್ಪಾ, ಶೋಭಾ, ಅನಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net