ಸಾರ್ವಜನಿಕರ ಸತಾಯಿಸಿದರೆ ಸಹಿಸಲಾಗದು

4spt3
ಸೋಮವಾರಪೇಟೆ ತಾಲೂಕು ಕಚೇರಿಗೆ ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ, ಸಾರ್ವಜನಿಕರ ಆಹವಾಲು ಆಲಿಸಿದರು. ಸತೀಶ್, ಕಾಂತರಾಜು, ಸತೀಶ್, ಲೋಕೇಶ್ ಇದ್ದರು.
Published on

ಸೋಮವಾರಪೇಟೆ: ರೈತರು, ಹಿರಿಯ ನಾಗರಿಕರು, ಮಹಿಳೆಯರನ್ನು ಸತಾಯಿಸುವ ಸಿಬ್ಬಂದಿಯನ್ನು ಸಹಿಸಲಾಗದು ಎಂದು ಶಾಸಕ ಡಾ.ಮಂತರ್‌ಗೌಡ ಎಚ್ಚರಿಸಿದರು.

ಸೋಮವಾರ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕರು, ರೈತರು, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಬೆಳಗ್ಗೆ 10ಗಂಟೆಯಿಂದ ನೆಮ್ಮದಿ ಕೇಂದ್ರದಲ್ಲಿ ಕುಳಿತಿದ್ದೇವೆ. ಇನ್ನು ಕೆಲಸವಾಗಿಲ್ಲ ಎಂದು ಮಹಿಳೆಯರು ಶಾಸಕರಿಗೆ ದೂರಿದರು. ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಕೆಲಸ ಮಾಡಿ ಕೊಡಬೇಕು ಎಂದು ಇದೇ ವೇಳೆ ಸಿಬ್ಬಂದಿಗೆ ಸೂಚಿಸಿದರು.

ಸರ್ವೇ ಇಲಾಖೆಗೆ ಭೇಟಿ ನೀಡಿದ ಶಾಸಕರು, ಸಿಬ್ಬಂದಿಗಳ ಸಮಸ್ಯೆ ಆಲಿಸಿದರು. ಕಚೇರಿ ದುರಸ್ತಿಗೆ ಅನುದಾನ ಕಲ್ಪಿಸುವ ಭರವಸೆ ನೀಡಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಕಾಂತರಾಜು, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಬಿ.ಬಿ.ಸತೀಶ್, ಜೆ.ಎಲ್.ನಾಗರಾಜ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net