ಸಾರ್ವಜನಿಕ ಗಣೇಶೋತ್ಸವ ಸಮಾಜದ ಒಗ್ಗಟ್ಟಿನ ಸಂಕೇತ

Published on

ಶಾಸಕ ಕೆ.ಎಚ್​.ಪುಟ್ಟಸ್ವಾಮಿ ಗೌಡ ಹೇಳಿಕೆ | ಗೌರಿಬಿದನೂರಲ್ಲಿ ರಸಸಂಜೆ ಕಾರ್ಯಕ್ರಮ ಅದ್ದೂರಿ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಸಾರ್ವಜನಿಕವಾಗಿ ಆಚರಿಸುವ ಗಣೇಶೋತ್ಸವ ಸಮಾಜದ ಒಗ್ಗಟ್ಟಿನ ಸಂಕೇತವಾಗಿದ್ದು, ಎಲ್ಲ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸುತ್ತದೆ ಎಂದು ಶಾಸಕ ಕೆ.ಎಚ್​. ಪುಟ್ಟಸ್ವಾಮಿ ಹೇಳಿದರು.ಬೈಪಾಸ್​ ಗಣೇಶೋತ್ಸವ ಸಮಿತಿ ಬಿಎನ್​ಆರ್​ ಗ್ಲೋಬಲ್​ ಅಕಾಡೆಮಿ ಮತ್ತು ಬಿ.ಎನ್​.ಆರ್​. ಸಂಯುಕ್ತ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶತಮಾನಗಳಿಂದ ಗಣೇಶೋತ್ಸವ ಆಚರಿಸುತ್ತಿದ್ದರೂ ಭಾರತೀಯ ಸ್ವಾತಂತ್ರ$್ಯ ಸಂಗ್ರಾಮದೊಂದಿಗೆ ಸಾರ್ವಜನಿಕ ಗಣೇಶೋತ್ಸವದ ಸಂಬಂಧ ಅನನ್ಯವಾದದ್ದು, ಗಣೇಶನ ಹಬ್ಬವನ್ನು ಸಾರ್ವಜನಿಕಗೊಳಿಸಿದ ಕೀರ್ತಿ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ. ಅವರು ಸ್ವಾತಂತ್ರ$್ಯ ಸಂಗ್ರಾಮದ ಸಮಯದಲ್ಲಿ ಜನರಲ್ಲಿ ಒಗ್ಗಟ್ಟು ಮೂಡಲಿಸಲು ಸಾರ್ವಜನಿಕ ಗಣೇಶೋತ್ಸವಕ್ಕೆ ಕರೆ ನೀಡಿದರು. ಆ ಪರಂಪರೆ ಇಂದಿಗೂ ಮುಂದುವರಿಯುತ್ತಿದ್ದು, ಜಾತಿ, ಧರ್ಮ ಮೀರಿ ಜನ ಒಗ್ಗಟ್ಟಿನಿಂದ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.

ಬೈಪಾಸ್​ ಗಣೇಶೋತ್ಸವ ಸಮಿತಿ 22 ವರ್ಷಗಳಿಂದ ವಿಶೇಷವಾಗಿ ಗಣೇಶೋತ್ಸವ ಆಚರಿಸುವ ಮೂಲಕ ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಬೆಸೆಯುತ್ತಿರುವುದು ಶ್ಲಾನೀಯ ಎಂದರು. ಜಿಎನ್​ಆರ್​ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎನ್​.ಚಂದ್ರಶೇಖರ್​ ಮಾತನಾಡಿ, ಬೈಪಾಸ್​ ಗಣೇಶೋತ್ಸವ ಸಮಿತಿ ಗಣೇಶೋತ್ಸವ ರಾಜ್ಯದಲ್ಲಿ ಮನೆ ಮಾತಾಗಿದೆ. ಈ ಬಾರಿ ಗಂಗಾ ನದಿ ಮಣ್ಣನ್ನು ತಂದು ಸ್ಥಳದಲ್ಲೇ ಪ್ರಣವ ರುದ್ರ ಗಣೇಶ ಮೂರ್ತಿ ತಯಾರಿಸಿ ಪ್ರತಿಷ್ಠಾಪಿಸುವ ಜತೆಗೆ ಬದರಿನಾಥ, ಅಯೋಧ್ಯೆ, ಕೇದಾರನಾಥ ಇನ್ನಿತರ ದೇವಾಲಯಗಳ ಪ್ರತಿ ರೂಪ ಸ್ಥಾಪಿಸಿರುವುದರಿಂದ ಜನರ ಆಕರ್ಷಣೆಗೆ ಕಾರಣವಾಗಿದೆ ಎಂದರು. ಸಮಿತಿ ಕಾರ್ಯಾಧ್ಯಕ್ಷ ರವಿಕುಮಾರ್​ ಮಾತನಾಡಿ, ಆ.27ರಿಂದ 19 ದಿನಗಳ ಕಾಲ ಉತ್ಸವ ನಡೆಯಲಿದೆ. ಪ್ರತಿ ದಿನ ಹೋಮ ಹವನ, ದೇವತಾ ಕಾರ್ಯಗಳು ನೆರವೇರಲಿವೆ. ಸಂಜೆ ಮನರಂಜನಾ ಕಾರ್ಯಕ್ರಮ ನಡೆಯಲಿವೆ ಎಂದರು.

ಜೀ ಕನ್ನಡದ ಸರಿಗಮಪ ತಂಡ ನೆರೆದಿದ್ದ ಸಭಿಕರಿಗೆ ಸಂಗೀತದ ರಸದೌತಣ ಉಣಬಡಿಸಿತು. ಡಿಸಿಸಿ ಬ್ಯಾಂಕ್​ ನಿರ್ದೇಶಕ ವೆಂಕಟರಾಮರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್​ ರೆಡ್ಡಿ, ಮುಖಂಡರಾದ ಗಂಗಸಂದ್ರ ಪಟೇಲಾ, ನಾಗಾರ್ಜುನ, ಡೆಲ್ಲಿ ಸಂದೀಪ್​,

ಕಿರಣ್​ ಗೌಡ, ಶ್ರೀನಿವಾಸ್​ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net