

ಹಳಿಯಾಳ: ಪಾಕಿಸ್ತಾನದಲ್ಲಿನ ಉಗ್ರರ ಅಡಗುತಾಣಗಳ ಮೇಲೆ ಈಗಾಗಲೇ ಏರ್‌ಸ್ಟೈಕ್ ನಡೆಸಿರುವ ಭಾರತೀಯ ಸೇನೆ ರಜೆಗೆ ಬಂದಿರುವ ತನ್ನೆಲ್ಲ ಸೈನಿಕರಿಗೆ ವಾಪಸ್ ಸೇವೆಗೆ ಹಾಜರಾಗುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ರಜೆಗೆ ಬಂದಿರುವ ಸೈನಿಕರು ಮತ್ತೆ ತಮ್ಮ ಸೇವೆಗೆ ಮರಳುತ್ತಿರುವ ವಿದ್ಯಮಾನ ಹಳಿಯಾಳದಲ್ಲಿ ಕಂಡು ಬರುತ್ತಿದೆ.
ಸೇವೆಗೆ ತುರ್ತಾಗಿ ಮರಳುವಂತೆ ಕರೆ ಬಂದಿರುವ ಕಾರಣ ವಿವಿಧ ಗ್ರಾಮಗಳ ವಿನಾಯಕ ನಾವಲಗಿ, ಸಾಗರ ನಾವಲಗಿ, ಮಹೇಶ ಘೋಟ್ನೇಕರ ಹಾಗೂ ತುಕಾರಾಮ ಕುಟ್ರೆ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಶುಕ್ರವಾರದ ಒಳಗೆ ಎಲ್ಲರೂ ತಮ್ಮ ಸೇವೆಗೆ ಮರಳಲಿದ್ದಾರೆಂದು ತಿಳಿದು ಬಂದಿದೆ.