

ಗೊರೇಬಾಳ: ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದು ಸಿಂಧನೂರು ಗ್ರಾಮೀಣ ಠಾಣೆ ಪಿಎಸ್‌ಐ ಮೌನೇಶ ರಾಠೋಡ್ ಹೇಳಿದರು.
ಇದನ್ನೂ ಓದಿ:ಮನೆಮನೆಗೆ ತೆರಳಿ ಯೋಜನೆಗಳ ಅರಿವು ಮೂಡಿಸಿ
ಗ್ರಾಮದ ಶರಣಬಸವೇಶ್ವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮನೆಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅಪರಾಧಗಳನ್ನು ತಡೆಯುವುದು ಪೊಲೀಸರ ಕರ್ತವ್ಯ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ. ಜನಸ್ನೇಹಿಯಾಗಿ ಪೊಲೀಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದ ಅವರು, ಅಪರಾಧಗಳ ತಡೆಗಾಗಿ ಗ್ರಾಮದ 40-50ಮನೆಗಳ ಒಂದು ಗುಂಪು ರಚಿಸಿ ಒಬ್ಬ ಮುಖ್ಯಸ್ಥನನ್ನು ನೇಮಿಸಲಾಗುತ್ತದೆ. ಅವರು ಊರಿನ ಕಾನೂನು ಸುವ್ಯವಸ್ಥೆ ಕುರಿತು ಇಲಾಖೆಗೆ ಸಲಹೆ ನೀಡುತ್ತಾರೆ ಎಂದರು.
ಎಎಸ್‌ಐ ಬಾಲಪ್ಪ, ಪೊಲೀಸ್ ಸಿಬ್ಬಂದಿ ಅಮರೇಗೌಡ, ತಿಪ್ಪಣ್ಣ, ಬಸವರಾಜ್, ಅಫ್ರೀನ್ ಬೇಗಂ, ಗ್ರಾಪಂ ಮಾಜಿ ಸದಸ್ಯ ಜೆ. ಶರಣೇಗೌಡ, ಪ್ರಮುಖರಾದ ಎಂ.ರಂಗನಗೌಡ, ಆರ್.ಮೋಹನರಡ್ಡಿ, ಎನ್.ಪಂಪನಗೌಡ, ಎನ್.ದೇವೇಂದ್ರಗೌಡ, ಲಕ್ಷ್ಮೀರಡ್ಡಿ, ಟಿ.ಮಲ್ಲನಗೌಡ, ವೆಂಕನಗೌಡ, ಆರ್.ಮಹೇಶ, ಅಮರೇಶ ಗಡ್ಡದ, ವಿವಿಎಸ್‌ಎಸ್‌ಎನ್ ನಿರ್ದೇಶಕ ಶರಣೇಗೌಡ ಪೊಪಾ, ಟಿ.ಸಿದ್ದಲಿಂಗೇಶ, ಟಿ.ದೇವರಾಜಗೌಡ ಇತರರಿದ್ದರು.