

ಹೊಳೆನರಸೀಪುರ: ಉತ್ತಮ ಕರ್ತವ್ಯ ನಿರ್ವಹಣೆಗಾಗಿ ವೃತ್ತ ನಿರೀಕ್ಷಕ ಬಿ.ಆರ್.ಪ್ರದೀಪ್ ಕುಮಾರ್ ರಾಷ್ಟ್ರಪತಿ ಪದಕ ಪಡೆದಿದ್ದು, ಇಂತಹವರನ್ನು ಸೋಶಿಯಲ್ ಕ್ಲಬ್ ಸದಸ್ಯರು ಗುರುತಿಸಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಡಿವೈಎಸ್‌ಪಿ ಶಾಲು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸೋಷಿಯಲ್ ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿ, ಪೋಲೀಸರು ಮತ್ತು ಸಾರ್ವಜನಿಕರ ಸಂಬಂಧ ಉತ್ತಮವಾಗಿರಬೇಕು. ಸಾರ್ವಜನಿಕರ ಸಹಕಾರವಿದ್ದರೆ ದಕ್ಷತೆ ಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದರು.
ಒಬ್ಬ ಪೋಲೀಸ್ ಅಧಿಕಾರಿ ತನ್ನ ಕರ್ತವ್ಯದಲ್ಲಿ ತೋರುವ ಬದ್ಧತೆ ಹಾಗೂ ಕರ್ತವ್ಯ ನಿಷ್ಠೆ ಪರಿಣಾಮ ಬೀರುತ್ತವೆ. ಅಧಿಕಾರಿಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ನಾಗರಿಕರ ಪ್ರಶಂಸೆಗೆ ಗುರಿಯಾಗುತ್ತಾರೆ. ಇಲಾಖೆಯಲ್ಲಿ ಅಂತಹವರ ಆಡಳಿತ ಹಾಗೂ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರದೀಪ್ ಕುಮಾರ್ ಅವರಿಗೆ ಈ ಪ್ರಶಸ್ತಿ ಬಂದಿರುವುದು ಅವರ ಕರ್ತವ್ಯ ನಿಷ್ಠೆಗೆ ಸಂದ ಗೌರವ ಎಂದರು.
ವೃತ್ತ ನಿರೀಕ್ಷಕ ಬಿ.ಆರ್.ಪ್ರದೀಪ್ ಕುಮಾರ್ ಮಾತನಾಡಿದರು. ಅಬಕಾರಿ ಇಲಾಖೆ ನಿರೀಕ್ಷಕ ಪಾಂಡುರಂಗ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ಪಿಎಸ್‌ಐ ಅಭಿಜಿತ್, ರಮೇಶ್ ಕುಮಾರ್ , ಸಲ್ಮಾನ್‌ಖಾನ್ ತಂಬುಳಿ, ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ, ಕಾರ್ಯದರ್ಶಿ ಸುದರ್ಶನ್ ಬಾಬು, ಹಿರಿಯ ಸದಸ್ಯರಾದ ರಂಗಸ್ವಾಮಿ, ವಿಶ್ವೇಶ್ವರಯ್ಯ, ಶಂಕರ ನಾರಾಯಣ ಐತಾಳ್, ನಟರಾಜ್, ಕೆ.ಎಂ.ಶಿವಕುಮಾರ್ ಇತರರು ಇದ್ದರು.