ರಟ್ಟಿಹಳ್ಳಿ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಲಿ

public cooperate in keeping Rattihalli town clean
Published on

ರಟ್ಟಿಹಳ್ಳಿ: ಪಟ್ಟಣದ ಸ್ವಚ್ಛತೆ ಕಾಪಾಡಲು ಹಸಿ ಕಸ ಮತ್ತು ಒಣ ಕಸ ವಿಂಗಡಣೆಗೆ ಪ್ರತಿ ಮನೆಗಳಿಗೆ ಪಂಚಾಯಿತಿ ವತಿಯಿಂದ ಬಕೆಟ್ ನೀಡಲಾಗುತ್ತಿದೆ. ಈ ಬಕೆಟ್ ಬಳಸಿಕೊಂಡು ಕಸ ವಿಂಗಡಿಸಿ, ವಿಲೇವಾರಿ ವಾಹನಕ್ಕೆ ನೀಡಬೇಕು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ಉಚಿತವಾಗಿ ಬಕೆಟ್ ವಿತರಣೆ, ಪರಿಶಿಷ್ಟ ಜಾತಿ-ಪಂಡಗಡದವರಿಗೆ ಸೋಲಾರ ಕಿಟ್ ಮತ್ತು ನೂತನ ಜೆಸಿಬಿ ಹಾಗೂ ಸಕ್ಕಿಂಗ್ ಮಿಷನ್ ಯಂತ್ರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಾಗರಿಕರು ಕಾರ್ವಿುಕರಿಗೆ ಸಹಕರಿಸುವ ಮೂಲಕ ಪಟ್ಟಣದ ಸ್ವಚ್ಛತೆಗೆ ಕೈಜೋಡಿಸಬೇಕು. ಪಟ್ಟಣ ಸ್ವಚ್ಛವಾಗಿದ್ದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಪಪಂ ನೂತನ ಸದಸ್ಯರು ರ್ಚಚಿಸಿ, ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರಟ್ಟಿಹಳ್ಳಿ ತಾಲೂಕು ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಮಾತನಾಡಿ, ಸಾರ್ವಜನಿರಕು ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಾರ್ಡ್​ಗಳಲ್ಲಿರುವ ಯಾವುದೇ ಮೂಲಸೌಕರ್ಯಗಳ ಸಮಸ್ಯೆಗಳನ್ನು ಸದಸ್ಯರ ಗಮನಕ್ಕೆ ತರಬೇಕು. ಎಲ್ಲರ ಸಲಹೆ ಮತ್ತು ಶಾಸಕರ ಸಹಕಾರದೊಂದಿಗೆ ಹಂತಹಂತವಾಗಿ ಪಟ್ಟಣದ ಅಭಿವೃದ್ಧಿಗೆ ಮಾಡೋಣ ಎಂದರು.

ಪಪಂ ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಸದಸ್ಯರಾದ ರವಿ ಹದಡೇರ, ಮಲ್ಲಮ್ಮ ಕಟ್ಟೇಕಾರ, ವೀರನಗೌಡ ಪ್ಯಾಟಿಗೌಡ್ರು, ಬಸವರಾಜ ಆಡಿನವರ, ಹರ್ಷದಬಾನು ಗೋಡಿಹಾಳ, ಪಿ.ಡಿ. ಬಸನಗೌಡ್ರು, ಲಕ್ಷ್ಮೀ ಚಿಕ್ಕಮೊರಬ, ಮಖಬುಲ್ಲಸಾಬ ಮುಲ್ಲಾ, ಸರ್ಪರಾಜ ಮಾಸೂರು, ಮಂಜುಳಾ ರಾಮಚಂದ್ರಪ್ಪ ಅಗಡಿ, ಶ್ರೀದೇವಿ ಭೈರಪ್ಪನವರ, ಬಸವರಾಜ ಕಟ್ಟೀಮನಿ, ಲಲಿತಾ ಚೆನ್ನಗೌಡ್ರು, ಸುಭಾಸ ಹದಡೇರ, ಜಾಕೀರ ಮುಲ್ಲಾ, ಬಾಬುಸಾಬ ಜಡದಿ, ಶಂಕರಗೌಡ ಚೆನ್ನಗೌಡ್ರು, ಮಂಜಪ್ಪ ಮಸೂರು, ಮಂಜಣ್ಣ ಅಸ್ವಾಲಿ, ವಿಜಯ ಅಂಗಡಿ, ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ಸಿಆರ್​ಪಿ ಜಗದೀಶ ಕಠಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net