ಸಾರ್ವಜನಿಕರು, ವ್ಯಾಪಾರಸ್ಥರು ಪ್ರತಿಭಟನೆ

paid parking
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ದಾಜೀಬಾನಪೇಟೆ, ಮೂರುಸಾವಿರ ಮಠ ರಸ್ತೆ, ವಿಕ್ಟೋರಿಯಾ ರಸ್ತೆಯಲ್ಲಿ ವಾಹನ ನಿಲುಗಡೆಗೆ ಗುತ್ತಿಗೆ ನೀಡಲಾಗಿರುವ ಪೇಯ್್ಡ ರ್ಪಾಂಗ್ ವ್ಯವಸ್ಥೆ ವಿರೋಧಿಸಿ ಸಾರ್ವಜನಿಕರು, ವ್ಯಾಪಾರಸ್ಥರು ಸೋಮವಾರ ಹಠಾತ್ ಪ್ರತಿಭಟನೆ ನಡೆಸಿದರು.

ಕೆಲ ಕಾಲ ದಾಜಿಬಾನಪೇಟೆಯಲ್ಲಿ ವಾಹನ ಸಂಚಾರ ತಡೆ ನಡೆಸಿದ ಪ್ರತಿಭಟನಾಕಾರರು ಪೇಯ್್ಡ ರ್ಪಾಂಗ್ ವ್ಯವಸ್ಥೆ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

ಈ ಭಾಗದ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಾಲಿಕೆ ಅಧಿಕಾರಿಗಳು ಎಸಿ ರೂಮ್ಲ್ಲಿ ಕುಳಿತು ಇಲ್ಲಿ (ದಾಜೀಬಾನಪೇಟ) ಪೇಯ್್ಡ ರ್ಪಾಂಗ್ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇದರ ಗುತ್ತಿಗೆ ಹಿಡಿದವರು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರೊಂದಿಗೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ನಮ್ಮ ಅಂಗಡಿ, ಮಳಿಗೆಗಳಲ್ಲಿ ಕೆಲಸ ಮಾಡುವವರು ಹಣ ಕೊಟ್ಟು ವಾಹನ ರ್ಪಾಂಗ್ ಮಾಡಬೇಕಾಗಿದೆ. ನಮ್ಮಲ್ಲಿ ಬರುವ ಕೋರಿಯರ್ ಬಾಯ್ 1-2 ನಿಮಿಷ ವಾಹನ ನಿಲುಗಡೆಗೆ 10 ರೂ. ಪಾವತಿಸಬೇಕಿದೆ. ಗುತ್ತಿಗೆದಾರರು ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ್ದ ಪಾಲಿಕೆ ಉಪ ಆಯುಕ್ತ (ಕಂದಾಯ) ಅಶೋಕ ಗುರಾಣಿ, ಸಹಾಯಕ ಆಯುಕ್ತ ಸಂತೋಷ ಅನಿಶೆಟ್ಟರ್ ಪೇಯ್್ಡ ರ್ಪಾಂಗ್ ರದ್ದು ಪಡಿಸುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರಾದ ಪ್ರಕಾಶ ಬುರಬುರೆ ತಿಳಿಸಿದ್ದಾರೆ.

ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಎನ್.ಎಂ. ಮೆಹರವಾಡೆ, ಆರ್.ಡಿ. ರತನ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net